ರಾಷ್ಟ್ರ ಸುದ್ದಿ

ಚಳಿಗೆ ತತ್ತರಿಸಿದ ಹರ್ಯಾಣದ ಕರ್ನಲ್ ನಲ್ಲಿ ಶೂನ್ಯ ತಾಪಮಾನ

ನವದೆಹಲಿ: ತೀವ್ರ ಚಳಿಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಶಕಗಳ ಬಳಿಕ ಹರ್ಯಾಣದಲ್ಲಿ ಶೂನ್ಯ ತಾಪಮಾನ ದಾಖಲಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಕುಸಿದಿದ್ದು, ಹರ್ಯಾಣದಲ್ಲಿ ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಶೂನ್ಯ ಡಿಗ್ರಿ ತಾಪಮಾನ ದಾಖಲಾಗಿದೆ. ಹರ್ಯಾಣದ ಕರ್ನಲ್ ನಲ್ಲಿ ಇಂದು ಶೂನ್ಯ ತಾಪಮಾನ ದಾಖಲಾಗಿದೆ. ಅಂತೆಯೇ ಗುರುಗ್ರಾಮದಲ್ಲಿ 1.4 ಡಿಗ್ರಿಗೆ ಕುಸಿದಿದ್ದು, ಹಿಸ್ಸಾರ್ ನಲ್ಲಿ ತಾಪಮಾನ 2.7ಕ್ಕೆ ಕುಸಿದಿದೆ. ಇತ್ತ ರೋಹ್ಟಕ್ ನಲ್ಲಿ ತಾಪಮಾನ 3.8ಕ್ಕೆ ಕುಸಿದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಡಿಗ್ರಿಗೆ ತಾಪಮಾನ ಕುಸಿದಿದೆ. ಇನ್ನು ಕರ್ನಾಟಕದಲ್ಲೂ ತಾಪಮಾನ ಕುಸಿದಿದ್ದು, ಇಂದು ಬೆಂಗಳೂರಿನಲ್ಲಿ ತಾಪಮಾನ 20 ಡಿಗ್ರಿಯಷ್ಟಿದೆ.

About the author

ಕನ್ನಡ ಟುಡೆ

Leave a Comment