ರಾಜಕೀಯ

ಚಿಕ್ಕಬಳ್ಳಾಪುರ ಜೆಡಿಎಸ್‌ಗೆ ಕೊಡಲ್ಲ: ಸಂಸದ ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ವಿಕದೊಂದಿಗೆ ಮಾತನಾಡಿದ ಅವರು, ದೇವೇಗೌಡರೂ ಸೇರಿದಂತೆ ಯಾರೇ ಸ್ವರ್ಧಿಸಿದರೂ ನಾನಂತೂ ಸ್ವರ್ಧಿಸುತ್ತೇನೆ. ಜೆಡಿಎಸ್‌ಗೆ ನಿಗದಿತ ಸ್ಥಾನಗಳು ಇರುವುದರಿಂದ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮೇಲೆ ಮನಸ್ಸಿರಬಹುದು, ಪ್ರಯತ್ನಗಳೂ ನಡೆಯಬಹುದು. ಅದರ ಬಗ್ಗೆ ಇನ್ನೂ ನಮ್ಮೊಂದಿಗೆ ಮಾತನಾಡಿಲ್ಲ. ಆದರೆ ಹಾಲಿ ಎಂಪಿ ಸೀಟನ್ನು ಕಾಂಗ್ರೆಸ್‌ ಬಿಟ್ಟುಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನುಡಿದರು.

ಇದೇ ವಿಚಾರದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್‌, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸಂಸತ್‌ ಕ್ಷೇತ್ರಗಳ ಬಗ್ಗೆ  ದೃಷ್ಟಿ ನೆಟ್ಟಿದೆ. ಇದಕ್ಕೆ ಜೆಡಿಎಸ್‌ ಪೂರಕ ಬೆಳವಣಿಗೆಗಳು ನಡೆಯುತ್ತಿವೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment