ರಾಜ್ಯ ಸುದ್ದಿ

ಚಿತ್ರದುರ್ಗ: ಮನೆಯ ಮಾಳಿಗೆ ಕುಸಿದು ತಾಯಿ, ಮೂವರು ಮಕ್ಕಳ ಸಾವು

ಚಿತ್ರದುರ್ಗ: ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಕುಸಿದುಬಿದ್ದು ನಾಲ್ವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. ಮೃತಪಟ್ಟವರನ್ನು ನಾಗರತ್ನಮ್ಮ ಮತ್ತು ಆಕೆಯ ಮಕ್ಕಳಾದ ಕೋಮಲ, ತೀರ್ಥವರ್ಧನ ಮತ್ತು ಯಶಸ್ವಿನಿ ಎಂದು ಗುರುತಿಸಲಾಗಿದೆ. ಆಕೆಯ ಪತಿ ಚಂದ್ರಶೇಖರ ಮತ್ತು ಮತ್ತೊಬ್ಬ ಬಾಲಕಿ ದೇವಿಕ ಗಂಭೀರವಾಗಿ ಗಾಯಗೊಂಡಿದ್ದು ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ತಹಸೀಲ್ದಾರ್ ಮಲ್ಲಿಕಾರ್ಜುನ ಮತ್ತು ಪೊಲೀಸ್ ಅಧಿಕಾರಿ ರೋಶನ್ ಜಮೀರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment