ರಾಷ್ಟ್ರ

ಚಿತ್ರನಟರ ವಿರುದ್ಧ ಕೃಷ್ಣಮೃಗ ಬೇಟೆ ಆರೋಪ: ತೀರ್ಪು ಇಂದು

ಜೋಧಪುರ:  ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿರುವ ಕೃಷ್ಣಮೃಗಗಳ ಬೇಟೆ ಪ್ರಕರಣದ ತೀರ್ಪನ್ನು ಇಲ್ಲಿಯ ಕೋರ್ಟ್ ಗುರುವಾರ (ಏ.5)  ಪ್ರಕಟಿಸಲಿದೆ.

‘1998ರಲ್ಲಿ ಸಿನಿಮಾ ಒಂದರ ಚಿತ್ರೀಕರಣದ ವೇಳೆ ಸಮೀಪದ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಈ ಬೇಟೆಗೆ ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು’ ಎಂಬ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ, ‘ಅಕ್ರಮ ಶಸ್ತ್ರಾಸ್ತ್ರ ಬಳಕೆ’ ಕಾಯ್ದೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳೆದ ಮಾರ್ಚ್‌ 28ರಂದು ವಾದ–ಪ್ರತಿವಾದ ಮುಗಿಸಿದ್ದ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತ್ತು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ. ಇವರು ಕೂಡ ಸಲ್ಮಾನ್‌ ಜೊತೆ ತೀರ್ಪು ಪ್ರಕಟಣೆಯ ಸಮಯದಲ್ಲಿ ಕೋರ್ಟ್‌ನಲ್ಲಿ ಹಾಜರಾಗಲಿದ್ದಾರೆ.

About the author

ಕನ್ನಡ ಟುಡೆ

Leave a Comment