ದೇಶ ವಿದೇಶ

ಚೀನಾಗೆ ಭೇಟಿ ನೀಡಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಂಗ್​ ಉನ್​

ಬೀಜಿಂಗ್​:  ನಿರಂತರವಾಗಿ ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಪರೀಕ್ಷೆ ನಡೆಸಿ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಂಗ್​ ಉನ್​ ಚೀನಾಗೆ ಭೇಟಿ ನೀಡಿ ಚೀನಾದ ಅಧ್ಯಕ್ಷ ಕ್ಸಿ​ ಜಿನ್​ಪಿಂಗ್​ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಕಿಮ್​ ಭಾನುವಾರದಿಂದ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಆದರೆ ಚೀನಾ ಕಿಮ್​ ಪ್ರವಾಸದ ಕುರಿತು ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಬುಧವಾರ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕಿಮ್​ ಪ್ರವಾಸವದ ಸುದ್ದಿಯನ್ನು ಖಚಿತ ಪಡಿಸಿದೆ. ಆದರೆ ಇದೊಂದು ಖಾಸಗಿ ಭೇಟಿ ಎಂದು ತಿಳಿಸಿದೆ.ಕಿಮ್​ 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕಿಮ್​ ದಕ್ಷಿಣ ಕೊರಿಯಾ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಉತ್ಸಾಹ ತೋರಿರುವ ಬೆನ್ನಲ್ಲೇ ಸಭೆಗೆ ಸಿದ್ಧತೆ ಮಾಡಿಕೊಳ್ಳಲು ಚೀನಾಗೆ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.ಕಿಮ್​ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಡೆಸಿದ ನಂತರ ಮಾತನಾಡಿದ ಕಿಮ್​ ನಾವು ಉತ್ತರ ಕೊರಿಯಾದಲ್ಲಿ ಅಣ್ವಸ್ತ್ರಗಳ ಪ್ರಮಾಣವನ್ನು ಕಡಿತ ಮಾಡಲು ಸಿದ್ಧರಿದ್ದೇವೆ. ಶಾಂತಿ ಮರುಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಮೇಲೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚೀನಾ ಮತ್ತು ಉತ್ತರ ಕೊರಿಯಾದ ನಡುವೆ ದಶಕಗಳಿಂದ ಉತ್ತಮ ಸಂಬಂಧವಿದೆ. ಉತ್ತರ ಕೊರಿಯಾಗೆ ಭೇಟಿ ನೀಡುವಂತೆ ಚೀನಾ ಅಧ್ಯಕ್ಷ ಕ್ಸಿ ಅವರಿಗೆ ಕಿಮ್​ ಆಹ್ವಾನ ನೀಡಿದ್ದಾರೆ. ಇದಕ್ಕೆ ಕ್ಸಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

About the author

ಕನ್ನಡ ಟುಡೆ

Leave a Comment