ದೇಶ ವಿದೇಶ

ಚೀನಾದ ಅಧ್ಯಕ್ಷರ ಅಧಿಕಾರದ ಮಿತಿಯನ್ನು ಹೆಚ್ಚಿಸಲಾಗಿದೆ,ಕ್ಸಿ ಆಸೆಗಿಲ್ಲ ತಡೆ

ಬೀಜಿಂಗ್‌(ಚೀನಾ): ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವು ದೇಶದ ಅಧ್ಯಕ್ಷರ ಅಧಿಕಾರಾವಧಿ ಮಿತಿಯನ್ನು ತೆಗೆದು ಹಾಕುವ ಇಂಗಿತವನ್ನು ವ್ಯಕ್ತಪಡಿಸಿದೆ. ಇದರಿಂದ ಹಾಲಿ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ದೀರ್ಘಕಾಲದವರೆಗೆ ಅಧಿಕಾರ ನಡೆಸಲು ಸಾಧ್ಯವಾಗಲಿದೆ.

ಈಗಿನ ನಿಯಮಗಳ ಪ್ರಕಾರ ಐದು ವರ್ಷಗಳ ಎರಡು ಅವಧಿಗೆ ಮಾತ್ರವೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬಹುದು.

ಕ್ಸಿ ಜಿನ್‌ ಪಿಂಗ್‌ ಅವರ ಎರಡನೇ ಅವಧಿ ಕಳೆದ ವರ್ಷ ಆರಂಭವಾಗಿದ್ದು 2023ರಲ್ಲಿ ಕೊನೆಗೊಳ್ಳಲಿದೆ.

ದೇಶದ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ರು ಎರಡು ಸತತ ಅವಧಿಗಳಿಗೂ ಹೆಚ್ಚು ಸೇವೆ ಸಲ್ಲಿಸಬಾರದು ಎಂಬ ಷರತ್ತನ್ನು ಸಂವಿಧಾನದಿಂದ ತೆಗೆದುಹಾಕುವುದಕ್ಕೆ “ಸಿಪಿಸಿ ಕೇಂದ್ರ ಸಮಿತಿಯು” ಪ್ರಸ್ತಾಪಿಸಿದೆ. ಎಂದು ಚೀನಾ ಮಾಧ್ಯಮದವರು ವರದಿ ಮಾಡಿದ್ದಾರೆ.

ಸಿಪಿಸಿ ಮತ್ತು ಸೇನೆಯ ಮುಖ್ಯಸ್ಥರಾಗಿರುವ 64 ವರ್ಷದ ಕ್ಸಿ ಜಿನ್‌ ಪಿಂಗ್‌ ಅವರ ಉತ್ತರಾಧಿಕಾರಿ ಯಾರು ಎನ್ನುವುದನ್ನು ಏಳು ಸದಸ್ಯರ ಉನ್ನತ ನಾಯಕತ್ವ ಸಮಿತಿಯು ಇನ್ನೂ ಘೋಷಿಸಿಲ್ಲ. ಹೀಗಾಗಿ ಎರಡನೆಯ ಅವಧಿಯ ನಂತರವೂ ಅಧಿಕಾರದಲ್ಲಿ ಮುಂದುವರಿಯಲು ಕ್ಸಿ ಆಸಕ್ತಿ ಹೊಂದಿದ್ದಾರೆ ಎಂದು ಸ್ಪಷ್ಟವಾಗಿತ್ತು.

ಆಧುನಿಕ ಚೀನಾದ ಪ್ರಭಾವಶಾಲಿ ನಾಯಕ ಕ್ಸಿ ಅವರು ಪಕ್ಷದ ಮುಖ್ಯಸ್ಥರಾಗಿ ಹಾಗೂ ದೇಶದ ಅಧ್ಯಕ್ಷರಾಗಿ 2013ರಲ್ಲಿ ಆಯ್ಕೆಯಾದರು. ನಂತರ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 2016ರಲ್ಲಿ ಸಿಪಿಸಿ ಅಧಿಕೃತವಾಗಿ ಅವರಿಗೆ ಮುಖ್ಯ ನಾಯಕನ ಸ್ಥಾನಮಾನ ನೀಡಿ ಗೌರವಿಸಿತು. ಕಳೆದ ಮೂರು ದಶಕಗಳಲ್ಲಿ ಅನುಸರಿಸುತ್ತಿದ್ದ ಸಾಮೂಹಿಕ ನಾಯಕತ್ವದ ತತ್ತ್ವವನ್ನು ಬದಿಗಿಟ್ಟು, ಪಕ್ಷ ದ ಎಲ್ಲಾ ವಿಭಾಗಗಳು ಕ್ಸಿ ಅವರನ್ನು ಪಕ್ಷದ ಉನ್ನತ ನಾಯಕನಾಗಿ ಘೋಷಿಸಿವೆ.

 

 

About the author

ಕನ್ನಡ ಟುಡೆ

Leave a Comment