ಅ೦ತರಾಷ್ಟ್ರೀಯ

ಚೀನಾದ ಗಣಿಗಾರಿಕೆ ಸಂಸ್ಥೆಯಿಂದ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ, ಪಾಕಿಸ್ತಾನಕ್ಕೆ ಮಾರಾಟಕ್ಕೆ ಸಿದ್ದತೆ: ಗ್ಲೋಬಲ್ ಟೈಮ್ಸ್

ಬೀಜಿಂಗ್ : ಚೀನಾದ ಗಣಿಗಾರಿಕಾ ಕಂಪೆನಿಯು ಸೂಪರ್ಸಾನಿಕ್ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದ್ದು ಇದು ಭಾರತ-ರಷ್ಯಾ ಸಹಯೋಗದಲ್ಲಿ ತಯಾರಾದ ಬ್ರಹ್ಮೋಸ್ ಗೆ ಪ್ರತಿ ಅಸ್ತ್ರವಾಗಲಿದೆ ಎಂದು ಮಾದ್ಯಮವೊಂದು ವರದಿ ಮಾಡಿದೆ. ಉತ್ತರ ಚೀನಾದ ನಿಗದಿತ ಸ್ಥಳವೊಂದರಲ್ಲಿ ಸೋಮವಾರ ನಡೆಸಲಾದ ಪರೀಕ್ಷೆಯು ಯಶಸ್ವಿಯಾಗಿದೆ, ಇದರಲ್ಲಿ ಉಡಾವಣಾ ಶಕ್ತಿಗೆ ಬಳಸಲಾಗುವ ಶಕ್ತಿ ಹಾಗೂ ಫ್ಲೈಟ್ ಕಂಟೋಲ್ ಸಿಸ್ಟಮ್ ಗಳನ್ನು ಪರಿಶೀಲನೆಗೆ ಒಳಪಡಿಅಲಾಗಿದೆ. ವಿಶೇಷವೆಂದರೆ ಚೀನಾ ಅಭಿವೃದ್ದಿ ಪಡಿಸಿರುವ ಈ ಕ್ಷಿಪಣಿಯನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಯೋಜನೆ ತಯಾರಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಎಚ್ ಡಿ-1  ಪರೀಕ್ಷಾ ಹಾರಾಟ ಇದೀಗ ಯಶಸ್ವಿಯಾಗಿದೆ.ಅದರ ವಾಯುಬಲವೈಜ್ಞಾನಿಕ ವಿನ್ಯಾಸ, ಸಾಮಗ್ರಿಗಳು ಮತ್ತು ಒಟ್ಟಾರೆ ರಚನೆಯು ಈಗಾಗಲೇ ಕಾರ್ಯಸಾಧನೆಗೆ ಅಗತ್ಯವಾದ ಸಾಮರ್ಥ್ಯ ಹೊಂದಿದೆ”ಬೀಜಿಂಗ್ ಮೂಲದ ಮಿಲಿಟರಿ ವಿಶ್ಲೇಷಕ ವೈ ಡಾಂಗ್ಸು ತಿಳಿಸಿದ್ದಾರೆ. ಹಂಗ್ಡಾ ಸಂಸ್ಥೆ ಎಚ್ ಡಿ-1 ಕ್ಷಿಪಣಿಯ ಅಭಿವೃದ್ದಿಗೆ ಸ್ವತಂತ್ರವಾಗಿ ಬಂಡವಾಳ ಹೂಡಿದೆ  ಮಿಲಿಟರಿ-ಸಿವಿಲಿಯನ್ ಏಕೀಕರಣ ಉದ್ದೇಶಕ್ಕೆ ಒಂದು ಸೂಪರ್ ಸಾನಿಕ್ ಕ್ಷಿಪಣಿ ರಚಿಸಲು ಹಾಗೂ ಪರೀಕ್ಷಿಸಲು ಗಣಿಗಾರಿಕಾ ಕಂಪನಿ ಮಾಡಿದ ಅತ್ಯುತ್ತಮ ಪ್ರಯತ್ನ ಇದಾಗಿದೆ.

About the author

ಕನ್ನಡ ಟುಡೆ

Leave a Comment