ದೇಶ ವಿದೇಶ

ಚೀನಾ–ನೇಪಾಳ–ಭಾರತ ಆರ್ಥಿಕ ಕಾರಿಡಾರ್

ಚೀನಾ-ನೇಪಾಳ ಭಾರತ ನಡುವಿನ ಆರ್ಥಿಕ ಕಾರಿಡಾರ್ ಪ್ರಸ್ತಾಪವನ್ನು ಚೀನಾ ಮುಂದಿಟ್ಟಿದೆ. ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಅವರ ಚೀನಾ ಭೇಟಿ ಸಂದರ್ಭದಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ನೇಪಾಳದಲ್ಲಿನ ಹೊಸ ಸರ್ಕಾರ ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ 2 ಕಾರಿಡಾರ್ ಯೋಜನೆಯನ್ನು ಚೀನಾ ಪ್ರಸ್ತಾಪಿಸಿದೆ.ಹಿಮಾಲಯವನ್ನು ಹಾದುಹೋಗುವ ಈ ಕಾರಿಡಾರ್ನಿಂದ ಮೂರು ದೇಶಗಳ ಆರ್ಥಿಕ ಹಾಗೂ ವಾಣಿಜ್ಯ ಸಂಬಂಧ ವೃದ್ಧಿಗೆ ಪೂರಕವಾಗಲಿದೆ ಎಂದು ಎರಡೂ ದೇಶಗಳ ನಾಯಕರ ಸಭೆಯಲ್ಲಿ ಚರ್ಚಿಸಲಾಗಿದೆ, ಈ ಕುರಿತು ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಆರ್ಥಿಕ ಕಾರಿಡಾರ್‌ನಲ್ಲಿ ರಸ್ತೆ, ವಿಮಾನಯಾನ, ಟೆಲಿಸಂಪರ್ಕ, ಬಂದರು ಹಾಗೂ ಇಂಧನ ಕ್ಷೇತ್ರಗಳಲ್ಲಿನ ಸಹಕಾರ ಒಳಗೊಂಡಿದೆ. ಭಾರತವು ಈಗಾಗಲೇ ಪಾಕ್ –ಚೀನಾ ಆರ್ಥಿಕ ಕಾರಿಡಾರ್‌ಗೆ ವಿರೋಧ ವ್ಯಕ್ತಪಡಿಸಿದೆ.

About the author

ಕನ್ನಡ ಟುಡೆ

Leave a Comment