ರಾಜಕೀಯ

ಚುನಾವಣಾ ನೀತಿ ಸಂಹಿತೆಯಿಂದ ಅಸಮಾಧಾನಗೊಂಡಿರುವ ಯಕ್ಷಗಾನ ಕಲಾವಿದರು

ಮಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರಾಜಕೀಯ ಉದ್ದೇಶಗಳಿಗೆ ಕಾರ್ಯಕ್ರಮ ನಡೆಸುವುದಿಲ್ಲವೆಂದು ಸಂಬಂಧಪಟ್ಟ ರಿಟರ್ನಿಂಗ್ ಆಫೀಸರ್ ಗೆ ಹೇಳಿಕೆ ಬರೆದುಕೊಟ್ಟು ಸಹಿ ಮಾಡಬೇಕೆಂದು ಯಕ್ಷಗಾನ ಕಾರ್ಯಕ್ರಮ ಸಂಘಟಕರಿಗೆ ಹೇಳಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರಲ್ಲಿ ನೋವುಂಟುಮಾಡಿದೆ.

ನವೆಂಬರ್ ನಿಂದ ಮೇಯವರೆಗೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ನೀಡುವ ಸೀಸನ್ ಆಗಿದ್ದು  ಈ ಸಂದರ್ಭದಲ್ಲಿ ಕಟೀಲು, ಮಂದರ್ತಿಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನಿಟ್ಟರೆ ಸಾವಿರಾರು ಜನರು ಬರುತ್ತಾರೆ. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ತಮಗೆ ಸಿಗುವ ಅವಕಾಶಗಳು ಕಡಿಮೆಯಾಗಬಹುದು ಎಂಬ ಆತಂಕ ಕಲಾವಿದರದ್ದು.ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣೆ ಸಂದರ್ಭದಲ್ಲಿ ಹೀಗೆ ಯಕ್ಷಗಾನ ಕಲಾವಿದರಿಗೆ ನಿಯಮ ಬಂದಿದ್ದು ಇದೇ ಮೊದಲು. ಇದು ಅನಗತ್ಯ ಮತ್ತು ಅಸಾಧ್ಯ ಕೂಡ. ಯಕ್ಷಗಾನ ಪ್ರದರ್ಶನದಲ್ಲಿ ರಾಜಕೀಯ ಇಣಕುವ ಉದಾಹರಣೆಗಳಿಲ್ಲ ಎನ್ನುತ್ತಾರೆ. ಉಡುಪಿ ಜಿಲ್ಲಾಡಳಿತ ಯಕ್ಷಗಾನ ಪ್ರದರ್ಶನಕ್ಕೆ ಸಂಘಟಕರಿಗೆ ಅನುಮತಿ ಪಡೆಯಬೇಕೆಂದು ಹೇಳಿದೆ. ಇದು ಹಲವು ಯಕ್ಷಗಾನ ತಂಡಗಳಿಗೆ ತೊಂದರೆಯಾಗಿದೆ ಎನ್ನುತ್ತಾರೆ

About the author

ಕನ್ನಡ ಟುಡೆ

Leave a Comment