ಸುದ್ದಿ

ಚುನಾವಣೆ ಇತಿಹಾಸ ಹೇಳುವ ಚಿತ್ರಗಳು

ಬೆಂಗಳೂರು: ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹುಟ್ಟಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯ ಚುನಾವಣಾ ಇತಿಹಾಸ ಸಾರುವ ಅಪರೂಪದ “ಛಾಯಚಿತ್ರ ಪ್ರದರ್ಶನ’ ಆಯೋಜಿಸಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏಳು ದಿನಗಳ ಕಾಲ ನಡೆಯುವ ಈ ಛಾಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಗುರುವಾರ ಚಾಲನೆ ನೀಡಿದರು. ದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆದು ಬಂದ ದಾರಿಯನ್ನು ಛಾಯಾಚಿತ್ರಗಳ ಮೂಲಕ ಪರಿಚಯಿಸಲಾಗಿದೆ. ಮುಖ್ಯವಾಗಿ 60ರ ದಶಕದಿಂದ ಇಲ್ಲಿವರೆಗೆ ಬೆಂಗಳೂರಿನಲ್ಲಿ ನಡೆದ ಚುನಾವಣೆಗಳ ಅಪರೂಪದ ಕ್ಷಣ ಮತ್ತು ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

ಮತಪತ್ರ ಮುದ್ರಣ, ಮಸ್ಟರಿಂಗ್‌, ಮತಗಟ್ಟೆಗಳು, ನಾಮಪತ್ರ ಸಲ್ಲಿಕೆ, ಮತಪತ್ರ ಮೂಲಕ ಮತದಾನ, ಸ್ಟ್ರಾಂಗ್‌ ರೂಂ, ಮತಎಣಿಕೆ ಪ್ರಕ್ರಿಯೆ, ಮತದಾನದಲ್ಲಿ ಮಹಿಳೆಯರು, ಹಾಗೂ ದಿವ್ಯಾಂಗರ  ಭಾಗವಹಿಸುವಿಕೆ,  ವಯೋವೃದ್ಧರು ಮತ ಚಲಾಯಿಸುವುದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತಯಂತ್ರ ಮತ್ತು ಮತದಾನ, ವಿವಿ ಪ್ಯಾಟ…ಯಂತ್ರಗಳ ಮಾಹಿತಿ. ರಾಷ್ಟ್ರೀಯ ಮತದಾರರ ದಿನಾಚರಣೆ, ಭಾರತ ಚುನಾವಣಾ ಆಯೋಗದ ಭೇಟಿ, ಮತದಾರರ ಪ್ರತಿಜ್ಞಾ ಸ್ವೀಕಾರ ಮತ್ತು ಮತದಾರರ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಒಟ್ಟು 17 ವಿಷಯಗಳ 50ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

 

About the author

ಕನ್ನಡ ಟುಡೆ

Leave a Comment