ರಾಜ್ಯ ಸುದ್ದಿ

ಚುನಾವಣೆ ಮೇಲೆ ಎಫೆಕ್ಟ್ ಭಯ: ಲಿಂಗಾಯತ ಸ್ಥಾನಮಾನ ಈಗ ಯಾರಿಗೂ ಬೇಡದ ವಿಷಯ

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ಬೆಂಬಲ ಅಥವಾ ವಿರೋಧ ವ್ಯಕ್ತ ಪಡಿಸಲು  ರಾಜ್ಯದ ಜನಪ್ರತಿನಿಧಿಗಳು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ  ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.
ವಿಧಾಸಭೆ ಚುನಾವಣೆಗೂ ಮುನ್ನ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧವಾಗಿ ಎಲ್ಲಾ ರಾಜಕಾರಣಿಗಳು ಮಾತನಾಡುತ್ತಿದ್ದರು, ಆದರೆ ಚುನಾವಣೆ ಫಲಿತಾಂಶಗದ ಮೇಲೆ ಅದರ ಎಫೆಕ್ಟ್ ಯಾವಾಗ ಉಂಟಾಯಿತೋ ಯಾರೋಬ್ಬರು ಈಗ ಆ ಸಂಬಂಧ ಬಾಯಿ ಬಿಚ್ಚಲು ಸಿದ್ಧರಿಲ್ಲ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ಅಂಗಳಕ್ಕೆ ನೀಡಿದೆ,  ಹೀಗಾಗಿ ಅದರ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಎಲ್ಲಿಯೂ  ಹೇಳಿಕೆ ನೀಡಲು ನಿರಾಕರಿಸಿದ್ದಾರೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಲಿಂಗಾಯತ ಧರ್ಮದ ವಿಚಾರವು ಕಾರಣ ಎಂಬುದಾಗಿ ಕಾಂಗ್ರೆಸ್ ಮನಗಂಡಿದೆ, ಲಿಂಗಾಯತ  ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಚಿವ ಎಂಬಿ ಪಾಟೀಲ್ ಅವರಿಗೆ ಇದೇ ಕಾರಣಕ್ಕೆ ಸಂಪುಟದಲ್ಲಿ ಸ್ಥಾನ ಕೂಡ  ನಿರಾಕರಿಸಲಾಯಿತು.  ಅವರ ಜೊತೆ ಶಾಸಕ ವಿನಯ್ ಕುಲಕರ್ಣಿ ಅವರಿಗೂ ಸಚಿವ ಗಿರಿ ಸಿಗಲಿಲ್ಲ,
ಈ ನಡುವೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುವಂತೆ ಒತ್ತಾಯಿಸಲು ಬಸವ ಧರ್ಮ ಪೀಠದ ಮಹಿಳಾ ಅಧ್ಯಕ್ಷೆ ಮಾತೆ ಮಹಾದೇವಿ  ಡಿಸೆಂಬರ್ 10 ಮತ್ತು 12 ರಂದು  ನವದೆಹಲಿಯಲ್ಲಿ ಲಿಂಗಾಯತ ಸಮಾವೇಶ ಆಯೋಜಿಸಿದ್ದಾರೆ. ಆದರೆ ಈ ಹಿಂದೆ ಎರಡು ಮೂರು ಬಾರಿ ಅವಮಾನ ಅನುಭವಿಸಿರುವ ನಾಯಕರು ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಲಿಂಗಾಯತ ಸಮಾವೇಶ ರಾಜಕೀಯ ಸಮಾವೇಶವಲ್ಲ, ಹೀಗಾಗಿ ಹಲವರು ಇದರಲ್ಲಿ ಭಾಗವಹಿಸುತ್ತಾರೆ,  ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಸಮುದಾಯದ ಯಾವೊಬ್ಬ ವ್ಯಕ್ತಿ  ಅಥವಾ ಎಲ್ಲರೂ ಸಮಾವೇಶಕ್ಕೆ ಬೆಂಬಲ ನೀಡಬಹುದಾಗಿದೆ,  ಹಲವು ಹಿರಿಯ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದು ರಾಷ್ಟ್ರೀಯ ಬಸವ ಸೇನೆ ಮುಖ್ಯಸ್ಥ ವಿನಯ್ ಕುಲಕರ್ಣಿ ಹೇಳಿದ್ದಾರೆ,
ಲಿಂಗಾಯತ ಧರ್ಮದ ವಿಚಾರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ  ಪರಿಣಾಮ ಬೀರಿಲ್ಲ, ಮಾತಾ ಮಹಾದೇವಿ ಅವರು ಆಯೋಜಿಸಿರುವ ಸಮಾವೇಶ ಅವರಿಗೆ ಬಿಟ್ಟ ವಿಚಾರ, ಅದರಲ್ಲಿ ಯಾರೂ ಮಧ್ಯಕ್ಕೆ ಬರಲು ಅವಕಾಶವಿಲ್ಲ, ಯಾರಿಗೆ ಏನು ಬೇಕೋ ಅದನ್ನು ಅವರು ಮಾಡಬಹದು ಎಂದು ಬಿಜೆಪಿ ಮುಖಂಡ ಪ್ರಭಾಕರ್ ಕೋರೆ ಹೇಳಿದ್ದಾರೆ, ಲಿಂಗಾಯತ ಧರ್ಮವನ್ನು  ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ಒಡೆಯಲು ಯತ್ನಿಸಿತು ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ,  ಪ್ರತ್ಯೇಕ ಧರ್ಮಕ್ಕಾಗಿ ಹಲವರು ಹೋರಾಟ ನೆಡಸಿದ್ದರು, ಈಗ ಸದ್ಯ ಬಿಜೆಪಿ ನೈತೃತ್ವದ ಎನ್ ಡಿ ಎ ಸರರ್ಕಾರದ ಮೇಲೆ ಎಲ್ಲರ ಕಣ್ಣು ನೆಟಿದ, ಕೇಂದ್ರ ಸರ್ಕಾರ ಯಾವ ಕಾರ್ಡ್ ಪ್ಲೇ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

About the author

ಕನ್ನಡ ಟುಡೆ

Leave a Comment