ಕ್ರೀಡೆ

ಚೆಂಡು ವಿರೂಪಗೊಳಿಸಿದ ಪ್ರಕರಣ: 2016ರಲ್ಲೇ ಸ್ಮಿತ್, ವಾರ್ನರ್ ಗೆ ವಾರ್ನಿಂಗ್ ನೀಡಿದ್ದ ರೆಫರೀ!

ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಮಾಜಿ ಉಪನಾಯಕ ಡೇವಿಡ್ ವಾರ್ನರ್ 2016ರಲ್ಲೇ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದು, ಪಂದ್ಯದ ರೆಫರಿಯಿಂದ ಎಚ್ಚರಿಕೆ ಪಡೆದಿದ್ದರಂತೆ.
ಹೌದು.. ದ.ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ವಿರೂಪಗೊಳಿಸಿದ ಪ್ರಕರಣದಿಂದಾಗಿ ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಈ ಹಿಂದೆಯೂ ಒಮ್ಮೆ ಇದೇ ಕೃತ್ಯವೆಸಗಿದ್ದರಂತೆ. 2016 ರಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ವಿಕ್ಟೋರಿಯಾ ತಂಡದ ಪರ ಆಡುತ್ತಿದ್ದ ವಾರ್ನರ್ ಮತ್ತು ಸ್ಮಿತ್ ನ್ಯೂ ಸೌತ್ ವೇಲ್ಸ್ ತಂಡದ ವಿರುದ್ಧ ಬಾಲ್ ಟೆಂಪರಿಂಗ್ ಕೃತ್ಯವೆಸಗಿದ್ದರು ಎಂದು ವರದಿಯೊಂದು ಹೇಳಿದೆ.

About the author

ಕನ್ನಡ ಟುಡೆ

Leave a Comment