ಕ್ರೀಡೆ

ಚೆನ್ನೈ ವಿರುದ್ಧ ಮುಂಬೈಗೆ 37 ರನ್ ಗಳ ಗೆಲುವು

ಮುಂಬೈ: ಐಪಿಎಲ್‌ ಟಿ-20 ಪಂದ್ಯಾಳಿಯಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್​  ವಿರುದ್ಧ ಮುಂಬೈ ಇಂಡಿಯನ್ಸ್​ 37 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಧೋನಿ ಪಡೆಯ ಗೆಲುವಿನ ಓಟಕ್ಕೆ ರೋಹಿತ್ ಬಳಗ ಬ್ರೇಕ್ ಹಾಕಿದೆ. ಇಂದು ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ, ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡರ್ ಪ್ರದರ್ಶನದ ನೆರವಿನೊಂದಿಗೆ ಎರಡನೇ ಗೆಲುವು ದಾಖಲಿಸಿದೆ. ಸೂರ್ಯಕುಮಾರ್ ಯಾದವ್ (59), ಕೃುಣಾಲ್ ಪಾಂಡ್ಯ (42), ಹಾರ್ದಿಕ್ ಪಾಂಡ್ಯ (25*) ಹಾಗೂ ಕೀರಾನ್ ಪೊಲಾರ್ಡ್ (17*) ಉತ್ತಮ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ನಿಗದಿತ  170 ರನ್‌ಗಳನ್ನು ಸೇರಿಸಿತು. ಗೆಲುವಿಗೆ 171 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ, ಕೇದರ್ ಜಾಧವ್(58) ಹೋರಾಟದ ಹೊರತಾಗಿಯೂ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ ಮುಂಬೈ ಗೆಲುವಿಗೆ ಕಾರಣರಾದರು.

About the author

ಕನ್ನಡ ಟುಡೆ

Leave a Comment