ರಾಷ್ಟ್ರ ಸುದ್ದಿ

ಚೆನ್ನೈ: ಸಿದ್ಧಗಂಗಾ ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ

ಚೆನ್ನೈ: ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ಸಿದ್ಧಗಂಗಾ ಶ್ರೀಗಳನ್ನು ನಿನ್ನೆ ಮತ್ತೆ ಐಸಿಯುಗೆ ಶಿಫ್ಟ್​ ಮಾಡಲಾಗಿದೆ.

ಸಂದರ್ಶಕರ ಭೇಟಿ ಹೆಚ್ಚುತ್ತಿರುವ ಕಾರಣದಿಂದ ಸೋಂಕು ತಗುಲುವು ಸಾಧ್ಯತೆ ಹೆಚ್ಚಾಗಿರುವುದರಿಂದ ಶ್ರೀಗಳಿಗೆ ಐಸಿಯುನಲ್ಲೇ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ.

ಶ್ರೀಗಳಿಗೆ ಕೃತಕ ಪೋಷಕಾಂಶ ನೀಡಲಾಗುತ್ತಿದೆ. ಹಾಗೂ ಅವರ ಇಷ್ಟಲಿಂಗ ಪೂಜೆಗೆ ಐಸಿಯುವಿನಲ್ಲೇ ವ್ಯವಸ್ಥೆ ಮಾಡಲಾಗಿದೆ. ಈ ವಾರಾಂತ್ಯದಲ್ಲಿ ಡಿಸ್ಚಾರ್ಜ್​ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment