ರಾಜಕೀಯ

ಛತ್ತೀಸ್‌ಗಢದಲ್ಲಿ ಇಂದು ಕೊನೆಯ ಹಂತದ ಮತದಾನ, ಭಾರಿ ಭದ್ರತೆ

ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆಯ ಎರಡನೇ ಮತ್ತು ಕೊನೆ ಹಂತದ ಚುನಾವಣೆ ಆರಂಭಗೊಂಡಿದ್ದು, ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 72 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, 1,079 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ವನ್ನು 1.54 ಕೋಟಿ ಮತದಾರರ ಪೈಕಿ 77.53 ಲಕ್ಷ ಪುರುಷರು, 76.46 ಲಕ್ಷ ಮಹಿಳೆಯರು ಮತ್ತು 877 ಜನ ತೃತೀಯ ಲಿಂಗಿಗಳು ಮತದಾನ ಮಾಡಲಿದ್ದಾರೆ.

19,336 ಬೂತ್‌ಗಳಲ್ಲಿ ಮುಂಜಾನೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಶಾಂತಿಯುತ ಮತದಾನಕ್ಕಾಗಿ ಒಂದು ಲಕ್ಷ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ನಕ್ಸಲ್‌ ಪೀಡಿತ ಜಿಲ್ಲೆಗಳಾದ ಗರಿದಾಬಾದ್‌, ಧಾಮ್ತರಿ, ಮಹಾಸಮುಂದ್, ಕಬಿರ್ಧಮ್‌, ಜಶ್‌ಪುರ ಮತ್ತು ಬಲ್ರಾಮ್‌ಪುರಗಳಲ್ಲಿ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ. \ನವೆಂಬರ್‌ 12 ರಂದು ಬಸ್ತಾರ್‌ ಮತ್ತು ರಾಜ್‌ನಂದ್ಗಾವ್‌ ಜಿಲ್ಲೆಗಳ 18 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ತೆಲಂಗಾಣ ಸೇರಿ ಛತ್ತೀಸ್‌ಗಢದಲ್ಲಿ ಡಿಸೆಂಬರ್‌ 11ಕ್ಕೆ 90 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

About the author

ಕನ್ನಡ ಟುಡೆ

Leave a Comment