ರಾಷ್ಟ್ರ ಸುದ್ದಿ

ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ: ಸಭಾಪತಿ ಅಸಮಾಧಾನ

ನವದೆಹಲಿ: ಸಂಸತ್ತಿನಲ್ಲಿ ನಾಯಕರ ಗದ್ದಲವನ್ನು ನೋಡಿ ಜನರು ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮುಂದುವರೆದ ಗದ್ದಲ ಕುರಿತು ಸಭಾಪತಿ ವೆಂಕಯ್ಯ ನಾಯ್ಡು ಅವರು ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತ್ರಿವಳಿ ತಲಾಖ್ ಹಾಗೂ ವಂದೇ ಮಾತರಂ ವಿವಾದ ಸಂಬಂಧ ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಭಾಪತಿಗಳು ಪದೇ ಪದೇ ಅಧಿವೇಶನವನ್ನು ಮುಂದೂಡುತ್ತಿದ್ದಾರೆ. ಪದೇ ಪದೇ ಗದ್ದಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು ಅವರು, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ. ನಮ್ಮನ್ನು ನೋಡಿ ಜನರು ನಗುತ್ತಿದ್ದಾರೆಂದು ಹೇಳುವ ಮೂಲಕ ಪ್ರತಿಭಟನೆಗಿಳಿದಿದ್ದ ಹಲವು ಸಂಸದರನ್ನು ಮೌನವಾಗಿರುವಂತೆ ಮಾಡಿದರು.
ರಾಜ್ಯಸಭೆ ಕಲಾಪ ಸುಗಮವಾಗಿ ಸಾಗಲು ದಯವಿಟ್ಟು ಸಹಕರಿಸಿ. ಅಧಿವೇಶನ ಅರ್ಥಪೂರ್ಣವಾಗಿ ಸಾಗಬೇಕು. ಹಲವು ವಿಚಾರಗಳ ಬಗ್ಗೆ ಚರ್ಚೆಗಳು ಬಾಕಿಯಿದೆ. ಸಮಸ್ಯೆಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment