ಸಿನಿ ಸಮಾಚಾರ

ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸೋಣ: ಶಾ ಬೆಂಬಲಕ್ಕೆ ರಾಣಾ

ಹೊಸದಿಲ್ಲಿ  : ‘ದೇಶದಲ್ಲಿ ಪೊಲೀಸ್‌ ಅಧಿಕಾರಿಯ ಸಾವಿಗಿಂತಲೂ ದನದ ಸಾವಿಗೆ ಹೆಚ್ಚಿನ ಪ್ರಾಧಾನ್ಯವಿದೆ’ ಎಂಬ ವಿವಾದ್ಮಾಕ ಹೇಳಿಕೆ ನೀಡಿರುವ ಹಿರಿಯ ಹಿಂದಿ ಚಿತ್ರ ನಟ ನಾಸಿರುದ್ದೀನ್‌ ಶಾ ಅವರನ್ನು ಮತ್ತೋರ್ವ ಹಿರಿಯ ನಟ ಆಶುತೋಷ್‌ ರಾಣಾ ಸಮರ್ಥಿಸಿದ್ದಾರೆ.

“ನಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮುಂತಾಗಿ ಯಾರೇ ಇರಲಿ, ಅವರು ತಮ್ಮ ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದಾಗ ನಾವು ಅದನ್ನು ಆಲಿಸಬೇಕು ಮತ್ತು ಆ ಬಗ್ಗೆ ಚಿಂತನೆ ನಡೆಸಬೇಕು’ ಎಂದು ಹೇಳುವ ಮೂಲಕ ರಾಣಾ ನಾಸಿರುದ್ದೀನ್‌ ಶಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಎಲ್ಲರಿಗೂ ಅವರವರ ಮನದಾಳದ ಮಾತನ್ನು, ಅಭಿಪ್ರಾಯವನ್ನು ಹೇಳಿಕೊಳ್ಳುವುದಕ್ಕೆ  ಪ್ರಜಾಸತ್ತೆಯಲ್ಲಿ ಅವಕಾಶವಿದೆ’ ಎಂದು ರಾಣಾ ಹೇಳಿದ್ದಾರೆ.

ಗೋಹತ್ಯೆ ವಿಷಯದಲ್ಲಿ ಬುಲಂದ್‌ಶಹರ್‌ ನಲ್ಲಿ ನಡೆದಿದ್ದ ಹಿಂಸೆಗೆ ಪೊಲೀಸ್‌ ಅಧಿಕಾರಿಯೋರ್ವರು ಬಲಿಯಾದುದರ ಹಿನ್ನೆಲೆಯಲ್ಲಿ ನಾಸಿರುದ್ದೀನ್‌  ಶಾ ಅವರು, “ಈ ದೇಶದಲ್ಲಿ ಕೆಲವರಿಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ, ಹಕ್ಕು ಇದ್ದಂತಿದೆ. ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿಲ್ಲ; ಯಾರಾದರೂ ನನ್ನ ಮಕ್ಕಳನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ನೀನು ಹಿಂದುವೋ ಮುಸಲ್ಮಾನನೋ ಎಂದು ಪ್ರಶ್ನಿಸಿದರೆ ಏನು ಉತ್ತರ ಕೊಡಬೇಕು ಎಂಬುದು ನನ್ನ ಮಕ್ಕಳಿಗೆ ಗೊತ್ತಿಲ್ಲ; ದೇಶದ ಇಂದಿನ ಈ ಸ್ಥಿತಿಯಲ್ಲಿ ಅವರ ಗತಿಯೇನು ಎಂಬ ಚಿಂತೆ ನನಗಾಗುತ್ತಿದೆ’ ಎಂದು ನಸೀರುದೀನ್‌ ಶಾ ಯೂಟ್ಯೂಬ್‌ ವಿಡಿಯೋ ಕ್ಲಿಪ್‌ ನಲ್ಲಿ ಹೇಳಿದ್ದರು.

ಶಾ ಅವರಿಗೆ ಬೆಂಬಲವಾಗಿ ನಿಂತಿರುವ ರಾಣಾ ಅವರು  “ಪ್ರತಿಯೋರ್ವರಿಗೂ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಶಾ ಅವರಿಗೂ ಆ ಹಕ್ಕಿದೆ. ನಾವು ಅವರ ಮಾತನ್ನು ಗೌರವದಿಂದ ಕಂಡು ಆ ಬಗ್ಗೆ  ಗಂಭೀರ ಚಿಂತನೆ ನಡೆಸಬೇಕು ಎಂದು ಹೇಳಿದರು.

 

About the author

ಕನ್ನಡ ಟುಡೆ

Leave a Comment