ರಾಜ್ಯ ಸುದ್ದಿ

ಜನಾರ್ದನ ರೆಡ್ಡಿ ಮನುಷ್ಯತ್ವ ಇಲ್ಲದ ಮನುಷ್ಯ: ಸಿದ್ದರಾಮಯ್ಯ

ಶಿವಮೊಗ್ಗ: ಮಾಜಿ ಸಚಿವ ಜನಾರ್ದನ ರೆಡ್ಡಿ ಮನುಷ್ಯತ್ವದ ಇಲ್ಲದ ಮನುಷ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಂಸ್ಕೃತಿ ಇಲ್ಲ. ಕ್ಷಮಿಸುವುದೇ ಮನುಷ್ಯನಿಗೆ ದೊಡ್ಡ ಗುಣ. ಈತ ಮನುಷ್ಯತ್ವ ಇಲ್ಲದ ಮನುಷ್ಯ. ರೆಡ್ಡಿಯನ್ನು ಜೈಲಿಗೆ ಕಳುಹಿಸಿದ್ದು ನಾನಲ್ಲ. ನಾನು ಹೇಳಿದ ತಕ್ಷಣ ನ್ಯಾಯಮೂರ್ತಿ ಜೈಲಿಗೆ ಕಳುಹಿಸಿಲ್ಲ. ಎಫ್​ಐಆರ್​ ಮತ್ತು ಸಾಕ್ಷ್ಯ ಪರಿಗಣಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ತಿರುಗೇಟು ನೀಡಿದರು.

ರೆಡ್ಡಿ ಕ್ರಿಮಿನಲ್ ಬ್ರೈನ್ ಇರುವ ಮನುಷ್ಯ. ಅದಕ್ಕೆ ಅವರನ್ನ ಹಾಗೂ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ರಾಜಕಾರಣದಲ್ಲಿ ಟೀಕೆ ಬೇರೆ, ಕುಟುಂಬದ ಬಗ್ಗೆ ಮಾತಾಡುವುದನ್ನ ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment