ರಾಜ್ಯ ಸುದ್ದಿ

ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಜನಾರ್ದನ ರೆಡ್ಡಿಯವರ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು.

ಡಾಲರ್ಸ್​ ಕಾಲನಿ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿ, ನಾನು ಜನಾರ್ದನ ರೆಡ್ಡಿಯವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾನು ಅವರ ಪರವೂ ಅಲ್ಲ, ವಿರೋಧವೂ ಇಲ್ಲ. ಆದರೆ ಸಿಸಿಬಿ ಕ್ರಮ ಸರಿಯಾಗಿಲ್ಲ. ಸಿಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕೆಲ್ಲ ನ್ಯಾಯಾಲಯದಲ್ಲಿ ಉತ್ತರ ಸಿಗಲಿದೆ ಎಂದು ಹೇಳಿದರು.
ಜನಾರ್ದನ ರೆಡ್ಡಿ ನಿಮ್ಮನ್ನು ಭೇಟಿಯಾಗಿದ್ದರಾ ಎಂಬ ಪ್ರಶ್ನೆಗೆ ಏನೂ ಉತ್ತರ ನೀಡದೆ ಹೋದರು. ಮಹದಾಯಿ ಸಭೆಗೆ ಹೋಗುವುದಿಲ್ಲ. ಮಹದಾಯಿ ಸರ್ವಪಕ್ಷ ಸಭೆಗೆ ನಾನು ಹೋಗುವುದಿಲ್ಲ. ನಮ್ಮ ಮನೆಯಲ್ಲಿ ಮದುವೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ನಮ್ಮ ಪಕ್ಷದ ಪರವಾಗಿ ಶಾಸಕ ಬಸವರಾಜ ಬೊಮ್ಮಾಯಿ ಹೋಗುತ್ತಾರೆ ಎಂದು ತಿಳಿಸಿದರು.

About the author

ಕನ್ನಡ ಟುಡೆ

Leave a Comment