ರಾಜಕೀಯ

ಜನ ಅಧಿಕಾರ ಕೊಟ್ಟರೇ ಇರ್ತೇವೆ, ಇಲ್ಲಾಂದ್ರೆ ರಾಗಿಮುದ್ದೆ ಉಂಡು ಮಲಗ್ತೇವೆ: ರೇವಣ್ಣ

ಹಾಸನ:  ಜನರು ಅಧಿಕಾರ ಕೊಟ್ಟರೇ ಇರುತ್ತೇವೆ, ಇಲ್ಲದಿದ್ದರೇ ಪಡುವಲಹಿಪ್ಪೆ ಮನೆಯಲ್ಲಿ ಎರಡು ರಾಗಿ ಗುಂಡು ಹೊಡೆದು‌ ಮಲ್ಕೊತೀವಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಅಂಟಿ ಕುಳಿತಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದ ಕೆ.ಎಸ್.ಈಶ್ವರಪ್ಪ ರಾಯಣ್ಣನನ್ನು ಬಿಟ್ಟು ಯಡಿಯೂರಪ್ಪನ ಪಾದಕ್ಕೆ ಬಿದ್ದರು. ನಮ್ಮ ರಾಷ್ಟ್ರ ಉಳಿಯಬೇಕಾದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಬಿಜೆಪಿ ಪರ ಕೆಲಸ ಮಾಡುವುದನ್ನು ಬಿಡಬೇಕು. ಏನಾದರು ಕೇಳಿದರೆ ನಾನು ಚುನಾವಣಾ ಆಯೋಗದಿಂದ ಬಂದಿದ್ದೇನೆ ಎನ್ನುತ್ತಾರೆ. ನಮ್ಮ ಅಭ್ಯರ್ಥಿಗೆ ಪ್ರತಿದಿನ ನೋಟಿಸ್ ನೀಡಿ ತೊಂದರೆ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment