ದೇಶ ವಿದೇಶ

ಜಪಾನ್ ಪ್ರಧಾನಿ ಶಿಂಜೊ ಅಬೆವರನ್ನು ಭೇಟಿಮಾಡಿರುವ ಸುಷ್ಮಾ ಸ್ವರಾಜ್

ಜಪಾನ್: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿ ಮಾಡಿದ್ದಾರೆ.  ಈ ವೇಳೆ ಭಾರತ ಹಾಗೂ ಜಪಾನ್ ನಡುವಿನ ದ್ವಿಪಕ್ಷೀಯ ಸಹಕಾರ ಹೆಚ್ಚಳ ಕುರಿತಂತೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.  ಇನ್ನೊಂದೆಡೆ ಜಪಾನ್ ಪ್ರಧಾನ ಮಂತ್ರಿ ಎರಡೂ ರಾಷ್ಟ್ರಗಳ ನಡುವಿನ ಸಾಂಪ್ರದಾಯಿಕ ಸ್ನೇಹವವು ಹೃದಯದಿಂದ ಹೃದಯಕ್ಕೆ ಬೆಸೆದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆ, ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಸಹಕಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗುರುವಾರದಂದು ಎರಡೂ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದ್ದರು. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಇಎಎಂ ಸಭೆ ನಡೆಸಲಾಗಿತ್ತು. ಇದಕ್ಕೂ ಮುನ್ನ ಸ್ವರಾಜ್ “ಲೆಬರಲ್ ಡೆಮಾಕ್ರಟಿಕ್ ಪಾರ್ಟಿ”  ಪಾಲಿಸಿ ರಿಸರ್ಚ್ ಕೌನ್ಸಿಲ್  ಫುಮಿಯೋ ಕಿಶಿಡಾ ಅವರನ್ನು ಭೇಟಿ ಮಾಡಿದ್ದರು

 

.

 

About the author

ಕನ್ನಡ ಟುಡೆ

Leave a Comment