ರಾಜಕೀಯ

ಜಮೀರ್ ಅಹಮದ್ ಕಾಂಗ್ರೆಸ್ ಹೋಗ್ತಿರೋದು ಅದರ ಅವನತಿಗೆ; ಎಚ್.ಡಿ.ದೇವೇಗೌಡ

ತುಮಕೂರು: ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎನ್ನುವ ಭ್ರಮೆಯಲ್ಲಿದೆ ಎಂಬ ಸಿಎಂ ಸಿದ್ಧರಾಮಯ್ಯ ಅವರ ಹೇಳಿಕೆಗೆ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ತಿರುಗೇಟು ನೀಡಿದ್ದು, ನಾನು ಸಿದ್ದರಾಮಯ್ಯನವರ ಹಾಗೆ ಅಹಂಕಾರದಿಂದ ಹೇಳಿಕೆ ನೀಡಲ್ಲ ಎಂದು ಬುಧವಾರ ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ’ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

’ಸಿದ್ದರಾಮಯ್ಯ ಅವರಿಗೆ ಅಧಿಕಾರ ಮತ್ತು ಹಣ ಇದೆ ಹಾಗಾಗಿ ಅವರು ಹೇಳ್ತಾರೆ, ಆ ಅಹಂಕಾರ ನಮ್ಮಲ್ಲಿ ಇಲ್ಲ’ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರನ್ನು ಮೊದಲು ಕಾಂಗ್ರೆಸ್ ಗುರುತಿಸಿರಲಿಲ್ಲ, ನಾನು ಅವರನ್ನು ಗುರುತಿಸಿ ಉಪಮುಖ್ಯಮಂತ್ರಿ‌ ಮಾಡಿದೆ, ಆನಂತರ ಕಾಂಗ್ರೆಸ್ ನವರು ಕರೆದುಕೊಂಡು ಹೋದ್ರು, ಇದಕ್ಕೆ ಎಸ್.ಎಂ.ಕೃಷ್ಣ ಮತ್ತು ವಿಶ್ವನಾಥ್ ಕಾರಣರು ಎಂದು ದೇವೇಗೌಡ ತಿಳಿಸಿದರು.

ಇದೇ ವೇಳೆ ಜಮೀರ್ ಅಹಮ್ಮದ್ ಕಾಂಗ್ರೆಸ್‌ಗೆ ಹೋಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು, ’ಜಮೀರ್ ಅಹಮದ್ ಕಾಂಗ್ರೆಸ್ ಹೋಗ್ತಿರೋದು ಅದರ ಅವನತಿಗೆ ಎಂದರು. ಇದರಿಂದ ಕಾಂಗ್ರೆಸ್ ಉನ್ನತಿಯಾಗುತ್ತೋ, ಅವನತಿಯಾಗುತ್ತೋ ಜನ ನಿರ್ಧರಿಸುತ್ತಾರೆ ಎಂದರು.

About the author

ಕನ್ನಡ ಟುಡೆ

Leave a Comment