ರಾಜಕೀಯ

ಜಮೀರ್ ಅಹ್ಮದ್ ಜಾತಕ ಬಿಚ್ಚಿಟ್ಟ ಅಲ್ತಾಫ್ ಪಾಷಾ ಹೇಳಿದ್ದೇನು!?

ಬೆಂಗಳೂರು: ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಜಮೀರ್ ಅಹ್ಮದ್ 300 ಕೋಟಿ ರೂಪಾಯಿ ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂಬುದು ಗೊತ್ತಿದೆ. ಜಮೀರ್ ಅಹ್ಮದ್ ಅಕ್ರಮಗಳ ದಾಖಲೆ ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್ ಪಾಷಾ ಸವಾಲು ಹಾಕಿದ್ದಾರೆ.

ಸೋಮವಾರ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಚಾಮರಾಜಪೇಟೆಯಲ್ಲಿರುವ ಜಮೀರ್ ಮನೆ ಬಾಡಿಗೆ ಮತ್ತು ಅಡ್ವಾನ್ಸ್ ನನ್ನದು. ನನ್ನ ಕೈ ಹಿಡಿತೀನಿ, ಕಾಲು ಹಿಡಿತೀನಿ ವೋಟ್ ಹಾಕಿಸು ಎಂದಿದ್ದ. ಜಮೀರ್ ಅಹ್ಮದ್ ನನ್ನ ಬಳಿ ಬೇಡಿಕೊಂಡ ವಿಡಿಯೋ ಇದೆ ಎಂದು ಹೇಳಿದರು.

ಮಾರ್ಕೆಟ್ ನಲ್ಲಿ ಬಡವರ 10 ಅಂಗಡಿಗಳನ್ನು ಮಾರಾಟ ಮಾಡಿದ್ದ, ಜಮೀರ್ ಮಾಡಿರುವ ಅಕ್ರಮಗಳ ಎಲ್ಲಾ ದಾಖಲೆ ಇದೆ. ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್ ಸವಾಲು ಹಾಕಿದ್ದಾರೆ.

 

About the author

ಕನ್ನಡ ಟುಡೆ

Leave a Comment