ರಾಷ್ಟ್ರ ಸುದ್ದಿ

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಕದನ ವಿರಾಮ ಉಲ್ಲಂಘನೆ: ಸೇನೆ ತಕ್ಕ ಉತ್ತರ

ಶ್ರೀನಗರ : ಪಾಕ್‌ ಪಡೆಗಳು ಇಂದು ಬುಧವಾರ ನಸುಕಿನ 4.30ರ ವರೆಗೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರ್‌ಬನೀ ವಲಯದಲ್ಲಿನ ಎಲ್‌ಓಸಿಯ ಉದ್ದಕ್ಕೂ ಕದನ ವಿರಾಮ ಉಲ್ಲಂಘನೆಗೈದು ಗುಂಡಿನ ದಾಳಿ ನಡೆಸಿರುವುದು ವರದಿಯಾಗಿದೆ. ಪಾಕ್‌ ಸೇನೆಯ ಗುಂಡಿನ ದಾಳಿಗೆ ಭಾರತೀಯ ಪಡೆಗಳು ತಕ್ಕುದಾದ ಉತ್ತರವನ್ನೇ ನೀಡಿವೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆ| ಕ| ದೇವೇಂದರ್‌ ಆನಂದ್‌ ತಿಳಿಸಿದ್ದಾರೆ ರಜೌರಿಯ ಕಲಾಲ್‌ ಪ್ರದೇಶದಲ್ಲಿ ಪಾಕ್‌ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment