ರಾಷ್ಟ್ರ ಸುದ್ದಿ

ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಎನ್ ಕೌಂಟರ್: ಇಬ್ಬರು ಜೈಶ್ ಉಗ್ರರ ಹತ್ಯೆ

ಶ್ರೀನಗರ: ಪುಲ್ವಾಮಾದಲ್ಲಿ ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಜೈಶ್ ಎ ಮೊಹಮ್ಮದ್ ಸಂಘಟನೆ ಮೇಲೆ ನಡೆಸಿದ್ದ ದಾಳಿಯ ನಂತರ ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಪರಿಸ್ಥಿತಿ ಉಗ್ವಿಗ್ನವಾಗಿದೆ. ಉಗ್ರರ ಉಪಟಳ ಇನ್ನೂ ನಿಂತಿಲ್ಲ.
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಭಾರೀ ಗುಂಡಿನ ಚಕಮಕಿ ಬುಧವಾರ ಮುಂಜಾನೆ ನಡೆದಿದ್ದು ಓರ್ವ ಉಗ್ರನನ್ನು ಸೇನೆ ಹೊಡೆದುರುಳಿಸಿದೆ. ಶೋಪಿಯಾನ್ ಜಿಲ್ಲೆಯ ಮಾಮೆಂಡರ್ ಗ್ರಾಮದಲ್ಲಿ ಭದ್ರತಾ ಪಡೆ ಪೊಲೀಸರು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿ ಉಗ್ರರು ಅವಿತಿರುವ ಬಗ್ಗೆ ನಿನ್ನೆಯೇ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮತ್ತಿಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಯಿದೆ. ಉಗ್ರರು ಅಡಗಿ ಕುಳಿತಿದ್ದ ಅಡಗುದಾಣಗಳ ಸುತ್ತ ಪ್ರದೇಶವನ್ನು ಭದ್ರತಾ ಪಡೆ ಪೊಲೀಸರು ಸುತ್ತುವರಿದಾಗ ಪೊಲೀಸರೆಡೆಗೆ ಗುಂಡಿನ ಮಳೆಗೈಯಲಾರಂಭಿಸಿದರು. ಇದಕ್ಕೆ ಯೋಧರು ಪ್ರತಿ ದಾಳಿ ನಡೆಸಿದ್ದರಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.

About the author

ಕನ್ನಡ ಟುಡೆ

Leave a Comment