ಸುದ್ದಿ

ಜಯಕರ್ನಾಟಕ ಯುವ ಸಮ್ಮಿಲನ; ಬೆಂಗಳೂರು ಪಶ್ಚಿಮ ಅಧ್ಯಕ್ಷರಾಗಿ ರಾಕೇಶ್ ಗೌಡ ಬಿ.ಎಚ್ ಆಯ್ಕೆ

ಬೆಂಗಳೂರು: ನಗರದ ಟೌನ್ ಹಾಲ್ ಬಳಿ ಶನಿವಾರ ಜರುಗಿದ ಜಯಕರ್ನಾಟಕ ಸಂಘಟನೆಯ ನೇತೃತ್ವದ ಯುವ ಸಮ್ಮಿಲನ ಕಾರ್ಯಕ್ರಮದಲ್ಲಿ ಯುವ ಘಟಕ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು.

ಬೆಂಗಳೂರು ಪಶ್ಚಿಮ ಜಿಲ್ಲೆ ಯುವ ಘಟಕ ಅಧ್ಯಕ್ಷರಾಗಿ ರಾಕೇಶ್ ಗೌಡ ಬಿ.ಎಚ್ ಆಯ್ಕೆ ಮಾಡಿ ಆದೇಶವನ್ನು ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಯುವ ಶಕ್ತಿ ಒಂದೆಡೆ ಕೇಂದ್ರೀಕೃತವಾಗಬೇಕು, ಉತ್ತಮ ನಾಯಕತ್ವ ಜೊತೆಗೆ ಸಮಾಜದಲ್ಲಿನ ನೊಂದವರ ಧ್ವನಿಯಾಗಿ ಕೆಲಸ ಮಾಡುವಂತಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ, ಸಂಘಟನೆ ರಾಜ್ಯ ಅಧ್ಯಕ್ಷ ಎಚ್.ಎನ್.ದೀಪಕ್, ಯುವಘಟಕ ರಾಜ್ಯ ಅಧ್ಯಕ್ಷ ಕೆ.ಎನ್ ಜಗದೀಶ್ ಹಾಗೂ ಪದಾಧಿಕಾರಿಗಳು ಸೇರಿದ್ದರು.

About the author

ಕನ್ನಡ ಟುಡೆ

Leave a Comment