ದೇಶ ವಿದೇಶ

ಜರ್ಮನಿ ಅಧ್ಯಕ್ಷ ಸ್ಟೈನ್ಮಿಯರ್‌ ಭಾರತ ಭೇಟಿ

ನವದೆಹಲಿ: ಜರ್ಮನಿ ಅಧ್ಯಕ್ಷ ಫ್ರಾಂಕ್‌ ವಾಲ್ಟರ್‌ ಸ್ಟೈನ್ಮಿಯರ್‌ ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕೇಂದ್ರ  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯ ಸಚಿವ ಎಸ್.ಎಸ್. ಅಹ್ಲುವಾಲಿಯಾ ಜರ್ಮನ್ ಅಧ್ಯಕ್ಷ ಹಾಗೂ ಅವರ ಪತ್ನಿ ಎಲ್ಕೆ ಬುಡೆನ್ಬೆಂಡರ್ ಅವರನ್ನು ಸ್ವಾಗತಿಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಜರ್ಮನಿ ಅಧ್ಯಕ್ಷ ಫ್ರಾಂಕ್‌ ವಾಲ್ಟರ್‌ ಸ್ಟೈನ್ಮಿಯರ್‌ ಮತ್ತು ಶ್ರೀಮತಿ ಎಲ್ಕೆ ಬುಡೆನ್ಬೆಂಡರ್ ಗೆ ಭಾರತಕ್ಕೆ ಸ್ವಾಗತ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ಎಸ್.ಎಸ್. ಅಹ್ಲುವಾಲಿಯಾ ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ ಕೋರಿದ್ದಾರೆ ಎಂದು ಕುಮಾರ್ ಟ್ವೀಟ್ ನಲ್ಲಿ ಹೇಳಿದ್ದಾರೆ. ವಾರಣಾಸಿ ಹಾಗೂ ಚೆನ್ನೈಗೆ ಭೇಟಿ ನೀಡಲಿರುವ ಸ್ಟೈನ್ಮಿಯರ್‌  ಮಾಧ್ಯಮ ಮಿತ್ರರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಇಓಗಳ ನಿಯೋಗದ ಜತೆ ಭಾರತಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

About the author

ಕನ್ನಡ ಟುಡೆ

Leave a Comment