ರಾಷ್ಟ್ರ ಸುದ್ದಿ

ಜಲ್ಲಿಕಟ್ಟು: ಯುವಕನ ಚಡ್ಡಿವನ್ನೇ ಕಿತ್ತು ಎಳೆದೊಯ್ದ ಗೂಳಿ, ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್‌

ಮಧುರೈ: ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಅದ್ಧೂರಿಯಾಗಿ ನಡೆಯುತ್ತಿದ್ದು ಅಳಂಗನಲ್ಲೂರ್ ನಲ್ಲಿ ನಡೆದ ಜಲ್ಲಿಕಟ್ಟುವಿನಲ್ಲಿ ಗೂಳಿಯನ್ನು ಹಿಡಿಯಲು ಮುಂದಾಗಿದ್ದ ಯುವಕನ ಚಡ್ಡಿಯನ್ನೇ ಗೂಳಿಯೊಂದು ಎಳೆದೊಯ್ದಿರುವ ಘಟನೆ ನಡೆದಿದೆ.
ಗೂಳಿಯನ್ನು ಹಿಡಿದು ತಮ್ಮ ಪ್ರರಾಕ್ರಮ ಮೆರೆದು ಬಹುಮಾನ ಗೆಲ್ಲುವ ಉತ್ಸಾಹದಲ್ಲಿ ನುರಿತ ನೂರಾರು ಯುವಕರು ಜಲ್ಲಿಕಟ್ಟುವಿನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಪಾಯಕಾರಿ ಜಲ್ಲಿಕಟ್ಟುವನ್ನು ನೋಡಲು ಸಹ ಸಾವಿರಾರು ಸಂಖ್ಯೆಯಲ್ಲಿ ಜನರು ಅಳಂಗನಲ್ಲೂರ್ ನಲ್ಲಿ ಸೇರಿದ್ದರು. ಈ ವೇಳೆ ಸ್ಪರ್ಧಾ ಗೂಡಿನಿಂದ ಹೊರಬಂದ ಗೂಳಿ ಯುವನೊರ್ವನನ್ನು ತಿವಿಯಲು ಮುಂದಾಗಿದೆ. ಈ ವೇಳೆ ಯುವಕನ ಚಡ್ಡಿ ಗೂಳಿಯ ಗೊಂಬುಗಳಿಗೆ ಸಿಕ್ಕಿಹಾಕಿಕೊಂಡಿದೆ. ಕೂಡಲೇ ಗೂಳಿ ಅಲ್ಲಿಂದ ಮುಂದೆ ಹೋಗಲು ಪ್ರಯತ್ನಿಸಿದ್ದರಿಂದ ಯುವಕ ಚಡ್ಡಿ ಕಿತ್ತು ಬಂದಿದೆ. ಕೂಡಲೇ ಯುವಕ ತನ್ನ ಮಾನ ಉಳಿಸಿಕೊಳ್ಳಲು ಆಚೆಕಡೆಗೆ ಓಡಿ ಹೋಗಿದ್ದಾನೆ.

About the author

ಕನ್ನಡ ಟುಡೆ

Leave a Comment