ದೇಶ ವಿದೇಶ ರಾಜ್ಯ

ಜಲ ಮಂಡಳಿಗೆ ‘ವಾಟರ್ ಲೀಡರ್ ಪ್ರಶಸ್ತಿ’

ಪ್ಯಾರಿಸ್ ಪೆವಿಲಿಯನ್ ಡಿ ಆರ್ಮೆನೊವಿಲ್ಲೆಯಲ್ಲಿ ನಡೆದ ಜಾಗತಿಕ ಜಲ ಸಮ್ಮೇಳನದಲ್ಲಿ ಬೆಂಗಳೂರು ಜಲಮಂಡಳಿಗೆ 2018 ವಾಟರ್ ಲೀಡರ್ ಪ್ರಶಸ್ತಿದೊರೆತಿದೆ. ಕುಡಿಯುವ ನೀರು  ಬಳಕೆ ಜಾಗೂ ತ್ಯಾಜ್ಯ ನೀರಿನ ಮರು ಬಳಕೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಕುಡಿಯುವ ನೀರಿನ ಸಂರಕ್ಷಣೆಗೆ ಆದ್ಯತೆ, ಸುಸ್ಥಿರ ಆರ್ಥಿಕ ಕ್ರಮ ಕೈಗೊಂಡಿರುವುದು ಮೊದಲಾದ ಅಂಶಗಳನ್ನು ಪರಿಗಣಿಸಿ ಜಲಮಂಡಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ.

ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಲವು ದೇಶಗಳ ಸರಕಾರಿ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಜಲಮಂಡಳಿಯ ಹೊಸ ಉಪಕ್ರಮ ವಿಭಾಗದಿಂದ ಪ್ರಶಸ್ತಿಗೆ ಅರ್ಜಿ ಸಲ್ಲಿಸಲಾಗಿತ್ತು.”ಕುಡಿಯುವ ನೀರು ಮತ್ತು ತ್ಯಾಜ್ಯ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಭವಿಷ್ಯದಲ್ಲಿ ನೀರು ಹಾಗೂ ತ್ಯಾಜ್ಯ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲುಸ್ಟ್ರಾಟೆಜಿಕ್ ಮಾಸ್ಟರ್ ಪ್ಲಾನ್-2050’ ರೂಪಿಸಲಾಗಿದೆ, ಇದೂ ಸೇರಿದಂತೆ ತಜ್ಞ ಅಧಿಕಾರಿಗಳು ರೂಪಿಸಿದ ಯೋಜನೆಗಳಿಗೆ, ಹೊಸ ಕ್ರಮಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ”.

About the author

ಕನ್ನಡ ಟುಡೆ

Leave a Comment