ರಾಷ್ಟ್ರ ಸುದ್ದಿ

ಜಾಗತಿಕ ಹಸಿವಿನ ಸೂಚ್ಯಂಕ: ಭಾರತಕ್ಕೆ 103ನೇ ಸ್ಥಾನ

ಜಾಗತಿಕ ಹಸಿವಿನ ಸೂಚ್ಯಾಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್) ದಲ್ಲಿ ಬಾರತಕ್ಕೆ 103ನೇ ಸ್ಥಾನ ಲಭಿಸಿದೆ. Welthungerhilfe ಮತ್ತು Concern Worldwide ವರದಿಯಂತೆ , “ಗಂಭೀರ ಹಸಿವಿನ ಸಮಸ್ಯೆ” ಹೊಂದಿರುವ 45 ದೇಶಗಳಲ್ಲಿ ಭಾರತವೂ ಒಂದಾಗಿದೆ. 2017 ರಲ್ಲಿ ಭಾರತವು 100ನೇ ಸ್ಥಾನದಲ್ಲಿತ್ತು ಆದರೆ ಈ ಸ್ಥಾನವನ್ನು ಈ ವರ್ಷದ ಶ್ರೇಯಾಂಕದೊಡನೆ ಹೋಲಿಕೆ ಮಾಡಲಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಹಂಗರ್ ಇಂಡೆಕ್ಸ್ (ಜಿಹೆಚ್ಐ) 13ನೇ ವರ್ಷದ ಸೂಚ್ಯಾಂಕ ವನ್ನು ಬಿಡುಗಡೆಗೊಳಿಸಿದೆ. ಇದು ನಾಲ್ಕು ಪ್ರಮುಖ ಅಂಶಗಳಾದ – ಪೋಷಣೆಯ ಕೊರತೆ, ಶಿಶುಗಳ ಮರಣ, ಮಗುವಿನಲ್ಲಿ ಪೋಷಕಾಂಶದ ಕೊರತೆ ಹಾಗೂ ಮಗುವಿನ ಬೆಳವಣಿಗೆ ಕುಂಠಿತಗೊಳ್ಳುವುದನ್ನು ಆಧಾರವಾಗಿತ್ಟುಕೊಂಡು ಈ ಅಂಕಿ ಅಂಶವನ್ನು ತಯಾರಿಸಿದೆ. ಇನ್ನು ಗಮನಾರ್ಹ ಸಂಗತಿಯೆಂದರೆ ಭಾರತದ ನೆರೆಹೊರೆಯ ರಾಷ್ಟ್ರಗಳಾದ ಚೀನಾ (25 ನೇ ಸ್ಥಾನ), ನೇಪಾಳ (72), ಮಯನ್ಮಾರ್ (68), ಶ್ರೀಲಂಕಾ (67) ಬಾಂಗ್ಲಾದೇಶ (86) ಸೇರಿ ಅನೇಕ ರಾಷ್ಟ್ರಗಳಿಗಿಂತ ಭಾರತ ಕೆಳಮಟ್ಟದಲ್ಲಿದೆ. ವರದಿ ಪ್ರಕಾರ, ಸುಮಾರು 124 ದಶಲಕ್ಷ ಜನರು ಜಗತ್ತಿನಾದ್ಯಂತ ತೀವ್ರ ಹಸಿವಿನ ಸಮಸ್ಯೆಯಿಂದ ಬಳಲುಇತ್ತಿWelthದ್ದಾರೆ. ungerhilfe ಎನ್ನುವುದು ಒಂದು ಲಾಭರಹಿತ ಸಂಸ್ಥೆಯಾಗಿದ್ದರೆ Concern Worldwide  ಬಡಜನರ ಜೀವನಮಟ್ಟ ಸುಧಾರಣೆಗಾಗಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತದೆ.

About the author

ಕನ್ನಡ ಟುಡೆ

Leave a Comment