ಅಂಕಣಗಳು

ಜಾತಿ ಸಮಾಜಕ್ಕೆ ಮರುಜನ್ಮದ ಮುಖವಾಡ – ಮುಖಪುಸ್ತಕ (ಫೇಸ್ ಬುಕ್)

ಇದೇನಿದು ಹೊಸ ಜಾತಿಯ ಇನ್ನೊಂದು ಮುಖವನ್ನ ಎಲ್ಲ ಸರಕಾರಿ ನಮೂನೆಗಳಲ್ಲಿ ಹೊಸದಾಗಿ ಸೇರ್ಪಡೆಯಾಗಿದೆಯೇ ಎಂಬ ಅಶ್ಯರ್ಯಚಕಿತವಾದ, ಪ್ರಶ್ನಾರ್ಥಕ ಮನೋಭಾವ ಹೊರಹೊಮ್ಮುತ್ತಿದ್ದರೆ ಆಶ್ಚರ್ಯವೇನಿಲ್ಲ ಬಿಡಿ !! ಫೇಸ್ ಬುಕ್ ‘ಜಾತಿ’ಯ ಸಮಾಜ ಎಂದಾಕ್ಷಣ ನಮ್ಮ ನಿಮ್ಮೆಲ್ಲರ ತಲೆ                     (ಲೈಕ್,ಕಾಮೆಂಟ್,ಶೇರ್) ನತ್ತ ಸಾಗುವುದು ನೈಜ ಹಾಗೂ ಹುಬ್ಬೇರಿಸುವಂತಹ ಸಂಗತಿ ಏನಲ್ಲ !

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅನುಭವಕ್ಕೆ ಬಂದಿರುವದು ಹಲವಾರು ಜಾತಿ ಪ್ರಭೇದಗಳ ಹೊಸ ಪರಿಚಯ, ಅರಿತಿರುವ ಹಾಗೆ ಇಲ್ಲಿಯವರೆಗೂ ಎಷ್ಟೋ ಬುದ್ದಿಜೀವಿಗಳು ನಮ್ಮ ದೇಶದಲ್ಲಿ ವಿವಿಧ ರೀತಿಯ ಕೆಲವೇ ಧರ್ಮಗಳು ಹಾಗೂ ಜಾತಿಗಳುಂಟು ಎಂಬುದು ಕಣ್ಣಿಗೆ ಕಪ್ಪು ಬಟ್ಟೆಯನ್ನ  ಕಟ್ಟಿ ಕಂಡಂತಹ ಸತ್ಯ.

ಆಧುನಿಕ ಭಾರತದ ಸ್ಥಿತಿಗತಿಗಳು ಬೆಳವಣಿಗೆಯತ್ತ ಸಾಗುತ್ತಿದೆ, ನಮ್ಮ ಆಧುನಿಕ ಭಾರತದ ಜನರೆಲ್ಲಾ ಮನದಾಳದಿಂದ ಯೋಚನಶಕ್ತಪೂರಕರು, ಜಾತಿ ಪ್ರಭೇದಗಳಿಂದ ವಿಚ್ಛೇಧನವಾಗುತ್ತಿರುವರು, ಮಾನವತಾವಾದ ಒಂದೇ ನಮ್ಮ ಧರ್ಮವೆಂಬ ಭಾವನೆಗಳ ಎಂಬುದು ಹಲವಾರು ಚಿಂತಕರ, ಬುದ್ದಿಜೀವಿಗಳ, ಮಾನವತಾವಾದಿಗಳ, ಪರಿಸರವಾದಿಗಳ ಕನಸು ಇವತ್ತಿನವರೆಗೂ ಮಾತ್ರ ಸಜೀವವಾಗಿತ್ತೆಂದು ಹೇಳಬಹುದಾಗಿದೆ. ಈ ಎಲ್ಲ ಕನಸುಗಳ ಭದ್ರ ಬುನಾದಿಯೇ ನಮ್ಮ ರಾಷ್ಟ್ರದ ಯುವ ಪೀಳಿಗೆ !!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುವ ಕಂಡರಿಯದ , ಕೇಳರಿಯದೇ ಇದ್ದಂತಹ ಜಾತಿ ನಾಮಫಲಕಗಳನ್ನು ನೋಡುತ್ತಿದ್ದರೆ , ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ                          ” ರಿಸರ್ವೇಶನ್ ” ಅನ್ನೋ ಪದ್ದತಿಯ ಬಗ್ಗೆ ಯಾವುದೇ ಒಂದು ಪ್ರಾಣಿಯು ಜಾತಿ ರಿಸರ್ವೇಶನ್ ವಿರುದ್ಧವಾಗಿ          ಧ್ವನಿ  ಎತ್ತಿದರೆ  ಪರಾಕಾಯದಿಂದ ಬಂದು ಅಪ್ಪಳಿಸುವ ಉಲ್ಕಾಪಾತದಂತಾಗುವುದು ಖಚಿತ.

ಇಂತಹ ಪರಿಸ್ಥಿತಿ ನಮ್ಮ ಯುವ ಪೀಳಿಗೆಗಳಿಗೆ ಕಣ್ಣಿದ್ದು ಕುರಡನಂತೆ ಚಿತ್ರವಿಲ್ಲದ ಪರದೆಯನ್ನ ನೋಡಿ ನಗುವಂತೆ ಮಾಡುತ್ತಿದೆ. ಈ ಸಾಮಾಜಿಕ ಜಾಲತಾಣಗಳು ಒಂದು ರೀತಿಯ ಸಮಾಜವನ್ನ ಪಾರದರ್ಶಕ ಆಡಳಿತ , ಆಧುನಿಕ ಜೀವನ ಶೈಲಿಯ ಕಡೆಗೆ ಸೆಳೆಯುತ್ತಿರುವದು ಒಂದು ಒಳ್ಳೆಯ ವಿಶೇಷತೆಯಾದರೆ ಜಾತಿ ಮೂಲಗಳನ್ನ ಎತ್ತಿಟ್ಟು ಹೊಸ ಜಾತಿ ಭೇದಗಳನ್ನ ಹುಟ್ಟಿ ಹಾಕೋದರಲ್ಲಿ ದೇಶದ ಸ್ಥಿತಿ ಮತ್ತೆ ಹಳೆಯ ಪದ್ದತಿಗೆ ಮರುಕಳಿಸುವದೇನೋ ಎಂಬ ಭೀತಿ ಕೋಟ್ಯಂತರ ಜನಗಳನ್ನ ಕಾಡುತ್ತಿದೆ. ಸರ್ವಜ್ಞ ನುಡಿದಂತೆ

ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ,

ಜಾತಿ ವಿಜಾತಿ ಎನಬೇಡ

ದೇವನೊಲಿದಾತನೇ ಜಾತ ಸರ್ವಜ್ಞ !!

ಈ ಒಂದು ಮಾತು ನೈಜತೆ ಕಾಣುವಲ್ಲಿ ಮರೀಚಿಕೆಯಾಗಿ ಉಳಿಯುವದೇನೋ ಎಂಬ ಭಯ ನೂರಾರು ಚಿಂತಕರಲ್ಲಿ ಕಾಡುತ್ತಿರುವದು ನೈಜ ಸಂಗತಿ. ಮುಂದಿನ ದಿನಮಾನಗಲ್ಲಿ ಎಷ್ಟೋ ಯುವಕರಗಳನ್ನೊಳಗೊಂಡ ಅನೇಕರ ಸಮೂಹ ಒಂದೇ ಒಂದು “ಮಾನವ ಜಾತಿ” , ಒಂದೇ ಒಂದು ಧರ್ಮ ಅದು “ಮಾನವ ಧರ್ಮ” ಎಂಬ ಮಾತನ್ನು ಕೇಳಲು ಮನುಕುಲದಲ್ಲಿ ಕಾಯುತ್ತಿರುವುದು ನಿಜವಾದ ಸಂಗತಿ.

ಇಂದಿನ ದಿನಮಾನಗಲ್ಲಿ ತಂದೆ ತಾಯಿ ಹಿರಿಯರ ಜವಾಬ್ದಾರಿ ತುಂಬಾ ಹೆಗಲೇರಿ ಕೂತಿರುವುದು ಯುವ ಪೀಳಿಗೆಗೆ ಮಾರ್ಗದರ್ಶನ ತೋರುವ ಹಾದಿಯಲ್ಲಿ.

 

 

 

 

ವೀರೇಶ್ ಬಿರಾದಾರ

ವಿಜಯಪುರ

                                                                     https://www.facebook.com/veeresh.biradar.18

About the author

ಕನ್ನಡ ಟುಡೆ

Leave a Comment