ರಾಜ್ಯ ಸುದ್ದಿ

ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದ ಕಾರಣ ಮೋದಿ ಪ್ರಧಾನಿಯಾದರು: ಎಚ್.ಡಿ ದೇವೇಗೌಡ

ಬಳ್ಳಾರಿ: ಮೂಲಭೂತವಾದಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು 2019 ರ ಲೋಕಸಭೆ ಚುನಾವಣೆಯಲ್ಲಿ ಜ್ಯಾತ್ಯಾತೀತ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕು ಎಂದು ಜೆಡಿಎಸ್ ಸರ್ವೋಚ್ಚ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಬಲವಾಗಿ ನಂಬಿದ್ದಾರೆ. ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದಿದ್ದ ಕಾರಣ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ದೇವೇಗೌಡರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರ: ದಶಕದ ನಂತರ ನೀವು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡಿದಿರಿ. ಈ ಪರಿವರ್ತನೆ ನಿಮಗೆ ಹೇಗೆ ಅನ್ನಿಸಿತು? ಎಚ್.ಡಿ ದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಪ್ರಚಾರ ನಡೆಸುವುದು ಮುಖ್ಯವಲ್ಲ, ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಮೂಲಭೂತವಾದಿಗಳನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಧ್ಯೇಯ. ಅದೇ ಇವತ್ತಿಗೆ ನಮ್ಮ ಪ್ರಮುಖ ಉದ್ದೇಶ, ಉಗ್ರಪ್ಪ, ದೇವೇಗೌಡ, ಶಿವಕುಮಾರ್ ಯಾರೇ ಆಗಲಿ ನಮಗೆ ರಾಜ್ಯ ಮಾತ್ರ ಮುಖ್ಯ, ಜಾತ್ಯಾತೀತ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಇಲ್ಲಿ ಮಹತ್ವ ಪಡೆಯುವುದಿಲ್ಲ, ದೇಶ ಶಾಂತಿಯುತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. 

ಪ್ರ: ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ದೇಶದ ಇತರೆ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಮಾದರಿಯೇ? ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಘರ್ಷಣೆ ಭಿನ್ನಾಭಿಪ್ರಾಯಗಳಿರುಬಹುದು, ಆದರೆ ಸೀಟು ಹಂಚಿಕೆ ಎಲ್ಲಾ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ಬರಲಾಗದು, ಆದರೆ ಚುನಾವಣೆ ನಂತರ ಜಾತ್ಯಾತೀತ ನಾಯಕರುಗಳಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಎಲ್ಲವನ್ನು ಮರೆತು ಒಂದಾಗಲು ನಿರ್ಧರಿಸಿದ್ದು ಒಮ್ಮತದ ಪ್ರಧಾನ ಮಂತ್ರಿಯನ್ನು ಆರಿಸುತ್ತೇವೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಯಾರಿಗೆ ಹೆಚ್ಚು ಲಾಭ?ಹೌದು ನಮ್ಮಲ್ಲಿ ಘರ್ಷಣೆ, ಅಸಮಾಧಾನ ಇದೆ, ಹಲವು ವರ್ಷಗಳಿಂದ ನಾವು ಪರಸ್ಪರ ಹೋರಾಟ ಮಾಡುತ್ತಿದ್ದೇವೆ, ಆದರೆ ಕೆಲ ತಿಂಗಳುಗಳ ಹಿಂದೆ ನಾಯಕತ್ವ ಮಟ್ಟದಲ್ಲಿ ಬದಲಾವಣೆಯಾಗಿ ಒಂದಾಗಿದ್ದೇವೆ, ಆದರೆ ಕಾರ್ಯಕರ್ತರ ಮಟ್ಟದಲ್ಲಿ ಇನ್ನೂ ಕೆಲ ಅಸಮಾಧಾನ ಘರ್ಷಣೆ ಮುಂದುವರಿದಿದೆ, ಆದರೆ 2019ರ ಲೋಕಸಭೆ ಚುನಾವಣೆ ಸಮಯಕ್ಕೆ ಈ ಎಲ್ಲಾ ಅಸಮಾಧಾನ ಭಿನ್ನಾಭಿಪ್ರಾಯ ಮರೆಯಾಗಿ ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ.

About the author

ಕನ್ನಡ ಟುಡೆ

Leave a Comment