ರಾಷ್ಟ್ರ ಸುದ್ದಿ

ಜಾಹೀರಾತು ಪಿತಾಮಹ ಆಲಿಕ್ ಪದಮ್ಸೀ ನಿಧನ

ನವದೆಹಲಿ: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ರಂಗಭೂಮಿ ತಜ್ಞ ಹಾಗೂ ಜಾಹೀರಾತು ಪಿತಾಮಹ ಎಂದೇ ಖ್ಯಾತಿ ಪಡೆದಿರುವ ಆಲಿಕ್ ಪದಮ್ಸೀ (90) ಯವರು ಶನಿವಾರ ನಿಧನ ಹೊಂದಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ‘ಗಾಂಧಿ’ಯಲ್ಲಿ ಪದಮ್ಸೀಯವರ ಮುಹಮ್ಮದ್ ಅಲಿ ಜಿನ್ನಾ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ಮತ್ತು ನಿರ್ಮಾಪಕನಾಗಿ ಅಷ್ಟೇ ಅಲ್ಲದೆ, ರಂಗಭೂಮಿ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.ಜಾಹೀರಾತು ಕಂಪನಿ ಲಿಂಟಾಸ್ ಬಾಂಬೆಗೆ ನೇತೃತ್ವ ವಹಿಸಿ ಮುಂದೆ ಭಾರತೀಯ ಜಾಹೀರಾತುಗಳ ಪಿತಾಮಹ (ಗುರು) ಎಂದೇ ಪ್ರಖ್ಯಾತಿ ಪಡೆದಿದ್ದರು. ಜಲಪಾತದಲ್ಲಿ ಲಿರಿಲ್ ಜೊತೆ ಬಾಲಕಿ, ಹಮಾರಾ ಬಜಾಜ್, ಕಾಮಸೂತ್ರದ ದಂಪತಿಗಳು ಇವು ಪದಮ್ಸೀ ಅವರು ಜಹೀರಾತು ಜಗತ್ತಿಗೆ ನೀಡಿರುವ ಕೊಡುಗೆಗಳಾಗಿವೆ. ಪದಮ್ಸೀ ಯವರ ಸಾಧೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ 2000ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಟಾಗೋರ್ ರತ್ನ ಪ್ರಶಸ್ತಿಯನ್ನು ಸಹ ಅವರು ಪಡೆದುಕೊಂಡಿದ್ದಾರೆ. ಒಮ್ಮೆ ಲಿಂಟಾಸ್ಗಾಗಿ ಕೆಲಸ ಮಾಡಿದ್ದ ನಿರ್ದೇಶಕ ಶ್ಯಾಮ್ ಬೆನಗಲ್, ದೇಶದಲ್ಲಿನ ಅತ್ಯಂತ ಅಸಾಧಾರಣ ವ್ಯಕ್ತಿಗಳಲ್ಲಿ ಇವರು ಒಬ್ಬರು ಎಂದು ಪ್ರಶಂಸಿಸಿದ್ದರು. ಪದಮ್ಸೀ ಯವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

About the author

ಕನ್ನಡ ಟುಡೆ

Leave a Comment