ರಾಷ್ಟ್ರ ಸುದ್ದಿ

ಜಿಎಸ್ ಟಿ ಹಾಗೂ ನೋಟು ಅಮಾನ್ಯತೆಯಿಂದ ದೇಶದ ಆರ್ಥಿಕತೆ ನಾಶ: ರಾಹುಲ್

ದೊಲ್ಫುರ್ ಮಾನಿಯಾ: ರಾಜಸ್ತಾನ ಚುನಾವಣಾ ಪ್ರಚಾರದ ಅಖಾಡ ಧುಮುಕ್ಕಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯತೆ ಹಾಗೂ ಜಿಎಸ್ ಟಿ ತೆರಿಗೆ ವ್ಯವಸ್ಥೆಯಿಂದ ದೇಶದ ಆರ್ಥಿಕತೆ ನಾಶಗೊಳುತ್ತಿದೆ ಎಂದು ಆರೋಪಿಸಿದರು. ದೊಲ್ಪೂರ್ ಮಾನಿಯದಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿಯಾಗುವ ಮೊದಲು ದೇಶದ ಕಾವಲುಗಾರ ಆಗುವುದಾಗಿ ಹೇಳಿದ ನರೇಂದ್ರ ಮೋದಿ, ಯಾರಿಗೆ ಕಾವಲುಗಾರರಾಗಿದ್ದಾರೆ ಎಂಬುದು ಸ್ಪಷ್ಪಪಡಿಸುತ್ತಿಲ್ಲ ಎಂದು ಟೀಕಿಸಿದರು. ಹಿಂದಿನ ಯುಪಿಎ ಸರ್ಕಾರ 70 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಆದರೆ, 15-20 ಉದ್ಯಮಿಗಳ 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ರೈತರ ನಯಾಪೈಸೆಯನ್ನೂ ಸಾಲ ಮನ್ನಾ ಮಾಡಿಲ್ಲ ಎಂದು ಆರೋಪಿಸಿದರು.ನೀರವ್ ಮೋದಿ, ಮೆಹೂಲ್ ಚೊಕ್ಸಿ, ಲಲಿತ್ ಮೋದಿ ಮತ್ತು ಅನಿಲ್ ಅಂಬಾನಿಯಂತಹ ಉದ್ಯಮಿಗಳಿಗೆ ಸಹಾಯ ಮಾಡುವ ಮೋದಿ,  ರೈತರು ಹಾಗೂ ಯುವಕರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಫೆಲ್ ಒಪ್ಪಂದ ಸಂಬಂಧ ಸಂಸತ್ತಿನಲ್ಲಿ  ಪ್ರಸ್ತಾಪಿಸಿದ ವಿಚಾರಕ್ಕೆ  ಮೋದಿ ಏನನ್ನೂ ಮಾತನಾಡಲಿಲ್ಲ ಎಂದು ಹೇಳಿದರು.ಕೇಂದ್ರ ಹಾಗೂ ರಾಜ್ಯಸರ್ಕಾರ ಮಹಿಳೆಯರು, ಯುವಜನಾಂಗ, ರೈತರು ಹಾಗೂ ಕೃಷಿ ಕಾರ್ಮಿಕರ ವಿರುದ್ಧವಾಗಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

About the author

ಕನ್ನಡ ಟುಡೆ

Leave a Comment