ಕ್ರೈಂ

ಜಿಮ್​​ ಟ್ರೇನರ್​ ಮೇಲೆ ಹಲ್ಲೆ ಪ್ರಕರಣ: ಜೈಲು ಸೇರಿರುವ ದುನಿಯಾ ವಿಜಯ್​

ಬೆಂಗಳೂರು: ಜಿಮ್​​ ಟ್ರೇನರ್​ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್​ ಮತ್ತು ಟೀಂ ಜಾಮೀನಿಗೆ ಅರ್ಜಿ ಸಲ್ಲಿಸಿದೆ. ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ನಂ.9035 ಆಗಿರುವ ವಿಜಯ್​ ಹಾಗೂ ಅವರ ಸಹಚರರನ್ನು ಪ್ರತ್ಯೇಕ ಸೆಲ್​ನಲ್ಲಿ ಇಡಲಾಗಿದೆ. ಪ್ರಸಾದ್​, ದುನಿಯಾ ವಿಜಯ್​, ಮಣಿ ಸೇರಿ ಜಾಮೀನಿಗಾಗಿ 8ನೇ ಎಸಿಎಂಎಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು ಇಂದು ಬೆಳಗ್ಗೆ 11.30ಕ್ಕೆ ವಿಚಾರಣೆ ಇದೆ. ಈ ಮೂವರು ಆರೋಪಿಗಳ ಪರ ವಕೀಲ ಶಿವಕುಮಾರ್​ ವಕಾಲತ್ತು ವಹಿಸಲಿದ್ದಾರೆ.

About the author

ಕನ್ನಡ ಟುಡೆ

Leave a Comment