ತಂತ್ರಜ್ಞಾನ

ಜಿಯೋ ಅನಿಯಮಿತ ಕರೆಗಳ ದುರುಪಯೋಗದ ಹಿನ್ನೆಲೆ ಅನಿಯಮಿತ ಕರೆಗಳು ರದ್ದು

ಜಿಯೋ ಇಲ್ಲಿಯವರೆಗೆ ಉಚಿತ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ಅವಕಾಶ ನೀಡಿತ್ತು.ಆದರೆ ಈ ಕರೆಗಳನ್ನು ಕೆಲವು ಖಾಸಗಿ ಕಂಪನಿಗಳು ತಮ್ಮ ವಾಣಿಜ್ಯಾತ್ಮಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿವೆ‌‌.  ಗ್ರಾಹಕರಿಗೆ ಕರೆಗಳನ್ನು ಮಾಡಿ ತಮ್ಮ ಕಂಪನಿಗಳ ಆಫರ್ ಹೇಳುವುದು.ಹೀಗೆ ಸುಮಾರು 10 ಗಂಟೆಗಳಿಗೂ ಅಧಿಕ ಸಮಯವನ್ನು ಜಿಯೋ ಕರೆಗಳನ್ನು ಮಾಡುತ್ತಿದ್ದವು. ಇದು ಜಿಯೋಗೆ ಸ್ವಲ್ಪ ಪೆಟ್ಟಾಯಿತು.ದೇಶದ ಬಡ ಜನರು ಕರೆಗಳಿಗೆ ದುಬಾರಿ ಹಣ ತೆತ್ತು ಮೋಸಹೋಗುತ್ತಿದ್ದುದನ್ನು ಮನಗಂಡು ಅಂಬಾನಿ ಉಚಿತ ಕರೆಗಳನ್ನು ನೀಡಿದ್ದರು. ಜಿಯೋದ ಅನ್ಲಿಮಿಟೆಡ್ ಕರೆಗಳನ್ನು ಕೆಲವರು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಜಿಯೋ ಈ ನಿರ್ಧಾರಕ್ಕೆ ಬಂದಿದೆ

ಹಾಗಾಗ ಯಾರು ಜಿಯೋ ಕರೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೋ ಅಂತಹವರಿಗೆ ಜಿಯೋ ದಿನದ ಅನಿಯಮಿತ ಕರೆಗಳಿಗೆ ತಡೆಯೊಡ್ಡಿದೆ. ಅಂದರೆ ಇಂತಹವರಿಗೆ ದಿನಕ್ಕೆ ಕೇವಲ 300 ನಿಮಿಷಗಳ ಕಾಲ ಕರೆ ಮಾಡಬಹುದು ಎಂದು ನಿಯಮ ಏರಿದೆ.ಆದರೆ ಇತರರಿಗೆ ಜಿಯೋದ ಅನ್ಲಿಮಿಟೆಡ್ ಕರೆಗಳು ಹಾಗೆಯೇ ಮುಂದುವರೆಯುತ್ತದೆ.

About the author

ಕನ್ನಡ ಟುಡೆ

Leave a Comment