ತಂತ್ರಜ್ಞಾನ ದೇಶ ವಿದೇಶ

ಜಿಯೋ ಮಾಹಿತಿ ಸೋರಿಕೆಯ ಬಗ್ಗೆ ತನಿಖೆ.

ಮುಂಬೈ: ವೆಬ್ ಸೈಟ್ ಒಂದರಲ್ಲಿ ರಿಲಯನ್ಸ್ ಜಿಯೊ ಗ್ರಾಹಕರ ಪೂರ್ಣ ಮಾಹಿತಿ ಸೋರಿಕೆ ಯಾಗಿದ್ದಕ್ಕಾಗಿ ಮಹಾರಾಷ್ಟ್ರದ ಪೊಲೀಸರು ರಾಜಸ್ಥಾನದ ಅಪರಾಧಿಯನ್ನ ಬಂಧಿಸಿದ್ದಾರೆ.

ಅಪರಾಧಿಯನ್ನು ರಾಜಸ್ಥಾನದ ನ್ಯಾಯಾಲಯದಿಂದ ಮುಂಬಯಿಗೆ ಕರೆತರಲಾಗುತ್ತದೆ.

ಜಿಯೋನ ಡೇಟಾಬೇಸ್ ಸೋರಿಕೆಯಾಗಿರುವ ಬಗ್ಗೆ ಮತ್ತು ಆತನು ಹೇಗೆ ಮಾಹಿತಿಯನ್ನು ಪಡೆಯುತ್ತಿದ್ದಾನೆಂದು ತನಿಖೆ ನಡೆಯುತ್ತಿದೆ.

ಜೂಯೋ ಗ್ರಾಹಕರ ಮಾಹಿತಿಯು Magicapk.com ನಲ್ಲಿ ಲಭ್ಯವಿರುವುದಾಗಿ ಸುದ್ದಿ ವರದಿ ಮಾಡಿದ ನಂತರ ಡೇಟಾ ಸೋರಿಕೆ ಸುದ್ದಿ ವೈರಲ್ ಆಗಿತ್ತು.

ಜಾಲತಾಣ ಪ್ರವೇಶಿಸಿದ ಕೆಲವರು ಆದಾರ್ ಕಾರ್ಡ್ ವಿವರಗಳನ್ನು ಒಳಗೊಂಡಂತೆ ತಮ್ಮ ವೈಯಕ್ತಿಕ ಡೇಟಾವನ್ನು ನೋಡಿದ್ದೇವೆ ಎಂದು ಹೇಳಿಕೊಂಡರು, ಇತರರು ಯಾವ ಮಾಹಿತಿಯೂ ದೊರೆಯಲಿಲ್ಲ ಎಂದು ಹೇಳಿದರು. ಈಗ ಸೈಟ್ ಲಭ್ಯವಿಲ್ಲ.

About the author

ಕನ್ನಡ ಟುಡೆ

Leave a Comment