ರಾಜ್ಯ ಸುದ್ದಿ

ಸೃಷ್ಟಿ ಹಂಚಿನಮನಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದಾಖಲೆ

ಬಾಗಲಕೋಟ: ಶಿಲ್ಪ ಕಲೆಗಳ ಬಿಡದ ಬಾಗಲಕೋಟೆ ಜಿಲ್ಲೆಯ ಸಕ್ರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಕರ್ನಾಟಕ ಸಾಂಸ್ಕೃತಿಕ ಹಾಗೂ ಲಲಿತ ಕಲಾ ವೇದಿಕೆ ಅನಗವಾಡಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮದೇ ಆದ ಪ್ರತಿಭೆಯನ್ನು ಪ್ರದರ್ಶಿಸಲು ಭಾಗವಹಿಸಿದ್ದರು. ಸುಮಾರು 40 ಶಾಲೆಗಳಿಂದ ಪ್ರತಿ ಶಾಲೆಗೆ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದರು ಹೀಗೆ ಭಾಗವಹಿಸಿದ ಶಾಲೆಗಳಲ್ಲಿ ನೆಹರು ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗುಳೇದಗುಡ್ಡ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಸೃಷ್ಟಿ ಹಂಚಿನಮನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕ ಸಾಂಸ್ಕೃತಿಕ ಹಾಗೂ ಲಲಿತ ಕಲಾ ವೇದಿಕೆ ಅನಗವಾಡಿ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಸೃಷ್ಟಿ ಹಂಚಿನಮನಿ ಮತ್ತು ಈ ಸ್ಪರ್ಧೆಗೆ  ಭಾಗವಹಿಸುವಂತೆ ಮಾರ್ಗದರ್ಶನ ಮಾಡಿದ ಶ್ರೀ ಮುತ್ತುಸ್ವಾಮಿ ದೇವಾಂಗಮಠ  ಅವರನ್ನು ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹೊಳಬಸು ಶೆಟ್ಟರ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತಯ್ಯ ಸರ ಗನಾಚಾರಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವೀರಣ್ಣ ಚಿಂದಿ ಪ್ರಾಚಾರ್ಯರಾದ ಮನೋಜ್ ಭಟ್ ಹಾಗೂ ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿ, ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ.
-ವರದಿಗಾರರು ರವಿಕುಮಾರ ಮುರಾಳ ಬಾಗಲಕೋಟ

About the author

ಕನ್ನಡ ಟುಡೆ

Leave a Comment