ಜೀವನ ಶೈಲಿ

ಜೀನ್ಸ್ ಪ್ರೀಯರಿಗೆ ಇದು ತಿಳಿದಿಲ್ಲ!

ಪ್ರಸ್ತುತ ಪ್ರಪಂಚದಾದ್ಯಂತ ಯುವತಿ,ಯುವಕರೆಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಿದ್ದಾರೆ.ಧರಿಸಲು ಅನುಕೂಲಕರವಾಗಿದೆಯೆಂದು ಕೆಲವರು ಧರಿಸಿದರೆ,ಸ್ಟೈಲ್ ಗಾಗಿ ಕೆಲವರು ಧರಿಸುತ್ತಾರೆ. ಜೀನ್ಸ್ ಪ್ಯಾಂಟ್ ಗಳಿಗೆ ಸಾಮಾನ್ಯವಾಗಿ ಮುಂದೆ ಎರಡು ಹಾಗು ಹಿಂದೆ ಎರಡು ಹೀಗೆ ಒಟ್ಟು ನಾಲಕ್ಕು ಜೇಬುಗಳಿರುತ್ತವೆ. ಈ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ.ಈಗ ಇನ್ನಷ್ಟು ಜೇಬುಗಳನ್ನು ಸೇರಿಸಿ, ಮುಂದುಗಡೆ ಚಿಕ್ಕ ಜೇಬನ್ನು ಇರಿಸಿದ್ದಾರೆ.ಅದು ಹೇಗೆ ಉಪಯೋಗಕ್ಕೆ ಬರುತ್ತದೆಂದು ನಿಮಗೆ ಗೊತ್ತೇ?
ಈಗ ನಾವು 1800 ಇಸವಿಯಷ್ಟು ಹಿಂದಕ್ಕೆ ಹೋಗೋಣ, ಆ ಕಾಲದಲ್ಲಿ ಕೌಬಾಯ್ಸ್ ಸರಪಳಿಗೆ ಚಿಕ್ಕ ಗಡಿಯಾರವನ್ನು ಸೇರಿಸಿ ತಮ್ಮ ಕೋಟಿನಲ್ಲಿ ಇರಿಸಿಕೊಳ್ಳುತ್ತಿದ್ದರಂತೆ.ಪ್ರಪಂಚ ಸುತ್ತಾಡುವ ಇವರು ತಮ್ಮ ಗಡಿಯಾರ ಕೆಳಗೆಬಿದ್ದು ಒಡೆದು ಹೋಗದಿರಲೆಂದು ಈ ರೀತಿ ಜಾಗ್ರತೆವಹಿಸುತ್ತಾರೆ.ಇನ್ನಷ್ಟು ಸ್ಟೈಲಾಗಿ ಕಾಣುವಂತೆ ಮಾಡುವ ಸಲುವಾಗಿ ಲೆವೀಸ್ ಕಂಪೆನಿಯ ಜೀನ್ಸ್ ಪ್ಯಾಂಟ್ ಗಳಿಗೆ ಈ ರೀತಿ ಚಿಕ್ಕ ಜೇಬನ್ನು ಒದಗಿಸಿರುತ್ತಾರೆ.ಮೊತ್ತಮೊದಲು ಈ ರೀತಿಯ ಚಿಕ್ಕ ಜೇಬುಗಳನ್ನು1897 ರಲ್ಲಿ ಆ ಸಂಸ್ಥೆ ತಯಾರುಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿತು.

ಆದರೂ ಇವುಗಳಿಂದ ನಮಗಾಗುವ ಪ್ರಯೋಜನವಾದರೂ ಏನೆಂದು ಯೋಚಿಸುತ್ತಿದ್ದೀರಾ?
ಈ ಜೇಬುಗಳನ್ನು ಕೇವಲ ಸ್ಟೈಲ್ ಗಾಗಿ ಮಾತ್ರವಲ್ಲದೆ,ಕೀ ಚೈನ್,ಸಣ್ಣ ಸರಪಳಿ ಹೊಂದಿರುವ ಗಡಿಯಾರಗಳನ್ನು ಈ ಜೇಬುಗಳಲ್ಲಿ ಇಡಬಹುದಾಗಿದೆ.ಇನ್ನೂ ನಾಣ್ಯಗಳು,ಬಸ್ಸು,ಸಿನಿಮಾ ಟಿಕೇಟುಗಳು ಹಾಗು ಅಂಗಿ,ಪ್ಯಾಂಟ್ ಜೇಬುಗಳಿಂದ ಕೆಳಗೆ ಬೀಳಬಹುದಾದ ವಸ್ತುಗಳನ್ನು ಈ ಜೇಬುಗಳಲ್ಲಿ ಸುರಕ್ಷಿತವಾಗಿಡಬಹುದು.ಲಿಪ್ ಬಾಮ್,ಲಿಪ್ ಸ್ಟಿಕ್,ಚಿಕ್ಕ ಬಾಚಣಿಗೆ,ಕಾಂಡೋಮುಗಳು,ಚಾಕು,ಐ ಪಾಡ್,ಪೆನ್ ಡ್ರೈವ್ ……ಹೀಗೆ ಅತಿ ಚಿಕ್ಕ ವಸ್ತುಗಳನ್ನು ಕೆಳಗೆ ಬೀಳದಂತೆ ಈ ಜೇಬುಗಳಲ್ಲಿ ಸುರಕ್ಷಿತವಾಗಿ ಇಡಬಹುದು.

About the author

ಕನ್ನಡ ಟುಡೆ

Leave a Comment