ಅಂಕಣಗಳು

ಜೀವನದ ಒಗಟು ಬಿಡಿಸುವ ನ್ಯಾನೋ ಕಥೆಗಳು

ಜೀವನದ ಒಗಟು ಬಿಡಿಸುವ ನ್ಯಾನೋ ಕಥೆಗಳು

ಜೀವನದ ಬಗೆಗಿನ ಸಂದೇಶವನ್ನು ಕೊಡಲು ವೇದ, ಉಪನಿಷತ್, ಧರ್ಮಗ್ರಂಥಗಳ ಮಾತ್ರ ಅಲ್ಲ, ಕೇವಲ ಹತ್ತೇ ಹತ್ತು ಸಾಲುಗಳ ಬರಹ ಕೂಡ ಬದುಕಿನ ಬಗ್ಗೆ ಭರವಸೆ, ಆತ್ಮವಿಶ್ವಾಸ ವನ್ನು ಮೂಡಿಸಬಲ್ಲವು ಎಂಬುದಕ್ಕೆ ಲೇಖಕಿ, ಪತ್ರಕರ್ತೆ ಶ್ವೇತಾ ನಿಹಾಲ್ ಜೈನ್ ಬರೆದಿರುವ ‘ ನ್ಯಾನೋ ಕಥೆಯೊಳಗೆ ನಾನು ನೀನು’ ಎಂಬ ೭೩ಪುಟದ ಪುಸ್ತಕಗಳ ಸಾಕ್ಷಿ ಎಂದೇ ಹೇಳಬಹುದು.

 • ೭೦ ಪುಟದ ನೂರಾರು ಕಥೆಗಳು ಅನುಭವದ ತಾಳೆಗರರಿಯಿಂದ ರಚಿತವಾಗಿವೆ ಎಂಬುದೂ ಪುಸ್ತಕ ಓದಿದ ಮೇಲೆ ಅರಿವಾಗುವುದು ಅಪ್ಪಟ ಸತ್ಯ. ಒಂದೊಂದು ಕಥೆಯೊಳಗೆ ಬರುವ ಗಂಡ, ಹೆಂಡತಿ, ಮಗ, ತಂದೆ,ತಾಯಿ, ವಿಧವೆ, ಶಿಕ್ಷಕ ಎಂಬ ಅಮೂರ್ತ ಪಾತ್ರಗಳು ಹೊಸದೊಂದು ಮೂರ್ತ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತವೆ.
  ಈ ನ್ಯಾನೋ ಕಥೆಗಳು ಓದಿತ್ತಾ ಹೋದಂತೆ ಒಂದರ ಬಗ್ಗೆ ಒಂದು ಅರಿವಾಗುತ್ತದೆ. ಸಂಬಂಧ, ಸಮಯ, ಪ್ರೀತಿ, ಅಂತಕರಣ, ನಿಸ್ವಾರ್ಥ, ಸೇವೆ ಈ ಎಲ್ಲ ಅಂಶಗಳ ಬಗ್ಗೆ ಬಹುವಾಗಿ ಚರ್ಚಿತ ವಾಗಿವೆ. ಇದು ಇಂದು ವೇಗವಾಗಿ ಓಡುತ್ತಿರುವ ಅಧುನಿಕ ಕಾಲಕ್ಕೆ ವಾಸ್ತವ ಎನಿಸುತ್ತದೆ. ಈ ಕೃತಿಯೂ ಕೂಡ ಈ ಜಾಯಮಾನಕ್ಕೆ ಪ್ರಸ್ತುತ ಎನಿಸುತ್ತದೆ. ಕನ್ನಡ ಮುಖಂಡ ಒಬ್ಬ, ತನ್ನ ಮಗಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿರುವುದೂ. ಹಾಗೂ ಉದಾರ ದಾನಿಯೊಬ್ಬ ಅನಾಥಶ್ರಮಕ್ಕೆ ದಾನ ಮಾಡಿದರೂ ತಮ್ಮ ತಂದೆ ತಾಯಿ ವೃದ್ದಾಶ್ರಮಕ್ಕೆ ಸೇರಲು ಹೊರಟಿರುದು ಇಂತಹ ಮೇಲು ಮುಖವಾಡಗಳನ್ನು ಇಂದು ಸಮಾಜದಲ್ಲಿ ನ್ಯಾನೋ ಕಥೆಗಳ ಮೂಲಕ ಬಿಚ್ಚಿಟ್ಟಾಗ ಇವು ವಾಸ್ತವ ಎನಿಸುತ್ತದೆ.
  ನ್ಯಾನೋ ಕಥೆಗಳು ಭಾವ ಸೂಕ್ಷ್ಮತೆಯಿಂದ ತೆರದುಕೊಂಡ ಕಥೆಗಳಾಗಿದ್ದು, ಜೀವನವನ್ನು ಅರ್ಥ ಮಾಡಿಸುತ್ತವೆ. ಜೀವನದ ಮೌಲ್ಯದ ಬಗ್ಗೆ ಒತ್ತಿ ಹೇಳಿ ಸರಿಯಾದ ದಾರಿ ಹಾಗೂ ತಪ್ಪನ್ನು ತಿದ್ದಿಕೊಳ್ಳಲು ಎಚ್ಚರಿಸುತ್ತವೆ.
  ಪ್ರೀತಿ ಪ್ರೇಮಗಳೊಂದಿಗೆ ಸಂಬಂಧಗಳು ಬೆಸುಗೆ ಕಂಡುಕೊಂಡು, practical ಜೀವನದ theoryಗಳಾಗಿವೆ ಎಂದು ಹೇಳಬಹುದು.
  ಇಲ್ಲಿ ಸಮಾಜದ ಮುಖವಾಡಗಳನ್ನು ಕಳಚಿ ಇಡುವುದಷ್ಟೇ ಅಲ್ಲ, ಕಥೆಗಳ ಕೊನೆಯಲ್ಲಿ ಪರಿಹಾರ ನೀಡಿ ಯೋಚಿಸುವ ಶಕ್ತಿ ಹೆಚ್ಚಿಸಿ ಬದಲಾವಣೆ ಮುನ್ನುಡಿಯಾಗಬಲ್ಲವು.
  ಜೀವನದ ಸುಖ ಶಾಂತಿ ನೆಮ್ಮದಿ ಬೇರೆಯೆಲ್ಲೋ ಹುಡುಕುವ ನಾವು ನಮ್ಮ ಆತ್ಮೀಯ ಸಂಬಂಧಗಳಲ್ಲಿ ಅದು ಇದೇ, ಇರುವುದರ ಕಡೆಗೆ ದಾರಿ ತೋರಿಸುವುದನನ್ನು ನ್ಯಾನೋ ಕಥೆಗಳು ಒತ್ತಿ ಹೇಳಿವೆ.
  ಅಂತರಂಗ ಹಾಗೂ ಬಹಿರಂಗ ಶುದ್ದಿಯನ್ನು ಮಾಡಿಕೊಳ್ಳಲು ಕರೆ ನೀಡುವ ಕಥೆಗಳು, ಸಾಂದರ್ಭಿಕ ಪರಿಹಾರ್ ಸೂತ್ರಗಳಾಗಿವೆ.
  ಕಳೆದ ಹೋದ ಕಾಲದ ಬಗ್ಎ ಚಿಂತಿಸಿ ಫಲವೇನೂ ಎಂಬಂತೆ ಇನ್ನು ಮುಂದೆ ಬರುವ ಕಾಲದ ಕಡೆಗೆ ಗಮನ ತೋರಿ ಎಂದು ಕಾಲನಿರ್ಣಯ ಕೊಡುವ ಈ ಕಥೆಗಳು ನಿಜಕ್ಕೂ ಓದಿದ ಮೇಲೆ ಜೀವನದ ಬಗ್ಗೆ ಹೊಸದೊಂದು ಭರವಸೆ ಮೂಡುವುದು ಗ್ಯಾರಂಟಿ. ಪ್ರತಿಯೊಂದು ಕಥೆಗಳು ಒಂದೊಂದು ವಿಶೇಷ ಸಂದೇಶವನ್ನು ನೀಡುತ್ತವೆ.
  ಈ ಕೃತಿಯ ಹೆಸರೇ ಹೇಳುವಂತೆ, ನ್ಯಾನೋ ಕಥೆಯೊಳಗೆ ನಾವು ನೀವು ಎಂಬಂತೆ ಇದು ನಮ್ಮ ನಿಮ್ಮ ಮನೆಯ ಮನದ ಚರ್ಚಿತ ವಿಷಯವಸ್ತುಗಳಾಗಿರುವಂದಂತೂ ಖಂಡಿತ. ಕೃತಿಗೆ ಕೊಡುವ ೯೦ ರೂಪಾಯಿಯಲ್ಲಿ ೯೦ ಟನ್ ಮಾನವೀಯ ಮೌಲ್್ಯದ ಜೀವನದ ವಿಷಯ ಸಾಮಾಗ್ರಿ ನೀಡುವುದಂತೂ ಅಪ್ಪಟ ಸತ್ಯ.
  ಕಥೆಗಳಲ್ಲಿ ಮೂಡಿಬರುವ ದಿನೇಶ ಹೊಳ್ಳರವರ ರೇಖಾ ಚಿತ್ರಗಳು ಓದಿನ ಕಥೆಗಳ ಸಮಗ್ರತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಹಾಗೂ ಓದನನ್ನು ಮುಂದುವರೆಸುವಲ್ಲಿ ಹಾಗೂ ಕೇಂದ್ರಿಕರಿಸುವಲ್ಲಿ ಯಶಸ್ವಯಾಗಿವೆ‌ ಎಂದು ಹೇಳಬಹುದು. ಅದಕ್ಕೆ ಸಾಕ್ಷಿಯೆಂದರೆ ನನ್ನ ಓದೇ. ಈ ಪುಸ್ತಕವನ್ನು ಓದಬೇಕೆಂದು ಕುಳಿತು ಕೆಲವು ಕೆಲವು ದಿನಗಳಿಂದ ಅಸೈನ್ಮೆಂಟ್ ಇರುವ ಕಾರಣ ಓದಿರಿಲಿಲ್ಲ. ಶುಕ್ರವಾರ ನನ್ನದು ವಾರದ ರಜೆ ಓದಿ ಮುಗಿಸಬಿಡಬೇಕೆಂಬ ಚಲದಿಂದ ಕುಳಿತ ನಾನು. ಸಂಜೆ ಚಹಾ ಸೇವಿಸಿ, ೪.೩೦ ಕುಳಿತ ನಾನು, ೭. ಗಂಟೆಯೊಳಗೆ ಓದಿ ಪ್ರತಿಯೊಂದು ಕಥೆಯ ಸಾಲನ್ನು ಕೂಡ ಆನಂದಿಸಿದೆ.  ಇಂತಹ ಒಂದು ಕೃತಿ ನೀಡಿದ ಲೇಖಕಿ ಶೃತಿ ನಿಹಾಲ್ ಜೈನ್ ಅವರಿಗೆ ಶುುುುಭಹಾರೈಸುವೆ.
  – ಶಿವ ಸ್ಥಾವರಮಠ.

About the author

ಕನ್ನಡ ಟುಡೆ

Leave a Comment