ಕ್ರೈಂ

ಜೀವಾವಾಧಿ ಶಿಕ್ಷೆ ಕಡಿಮೆ ಮಾಡಿ: ರಾಜ್ಯಪಾಲರಿಗೆ ಆಸಾರಾಂ ಬಾಪು ದಯಾ ಅರ್ಜಿ

ಜೋಧ್‌ಪುರ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ರೇಪ್‌ ಕೃತ್ಯ ಎಸಗಿದ ಅಪರಾಧಕ್ಕೆ ಜೀವಾವಾಧಿ ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನವ ಆಸಾರಾಂ ಬಾಪು, ತನ್ನ ಜೀವಾವಧಿ ಶಿಕ್ಷೆಯನ್ನು ಕಡಿಮೆ ಮಾಡುವಂತೆ ರಾಜಸ್ಥಾನ ರಾಜ್ಯಪಾಲರಲ್ಲಿ ದಯಾ ಅರ್ಜಿಯನ್ನು ಸಲ್ಲಿಸಿರುವುದಾಗಿ ವರದಿಗಳು ತಿಳಿಸಿವೆ. ಬಾಲಕಿಯ ಮೇಲೆ ನಿರಂತರ ಐದು ವರ್ಷಗಳ ಕಾಲ ಅತ್ಯಾಚಾರ ನಡೆಸಿದ ಅಪರಾಧಕ್ಕಾಗಿ ಈ ವರ್ಷ ಎ.25ರಂದು ಜೋಧ್‌ಪುರ ನ್ಯಾಯಾಲಯ ಆಸಾ ರಾಂ ಬಾಪುಗೆ ಜೀವಾವಧಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಆಸಾ ರಾಂ ಜುಲೈ 2ರಂದು ಹೈಕೋರ್ಟಿಗೆ ಅರ್ಜಿ ಹಾಕಿದ್ದು ಅದಿನ್ನೂ ವಿಚಾರಣೆಗೆ ಬಂದಿಲ್ಲ.

 

About the author

ಕನ್ನಡ ಟುಡೆ

Leave a Comment