ಅಂಕಣಗಳು ಪರಿಸರ

ಜೀವಿಗಳ ಹುಟ್ಟಿನ ಗುಟ್ಟು ರಟ್ಟು ಮಾಡಲು ವಿಜ್ಞಾನಿಗಳ ಪಣ

ಭೂಮಿ ಮೇಲಿನ ಜೀವಿಗಳ ಆನುವಂಶಿಕ ಮಾಹಿತಿ ಕಲೆ ಹಾಕುವ ಮಹತ್ವದ ಕಾರ್ಯಕ್ಕೆ ವಿಜ್ಞಾನಿಗಳು ಯೋಜನೆ  ರೂಪಿಸಿದ್ದಾರೆ. ‘ಅರ್ಥ್ ಬಯೋಜೀನೋಮ್’ ಹೆಸರಿನ ಕೈ ಈ ಯೋಜನೆ ಮೂಲಕ ಭೂಮಿ ಮೇಲಿನ ಯುಕರೆಯೋಟ್ ವರ್ಗಕ್ಕೆ ಸೇರಿದ ಎಲ್ಲ ಜೀವಿಗಳ ಜೀನೋಮ್ಸ್ (ಅನು ವಂಶಿಕ) ಮಾಹಿತಿಯ ಅನುಕ್ರಮ, ವಿಂಗಡಣೆ ಹಾಗೂ ವಿಶ್ಲೇಷಣೆ ನಡೆಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಜೀವಿ ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಜೀವವಿಜ್ಞಾನಿಗಳು ಈ ಮಾಹಿತಿ ನಿಟ್ಟಿನಲ್ಲಿ ಸಂಘಟಿತರಾಗಿ ಕಾರ್ಯನಿರ್ವ ಹಿಸಲಿದ್ದಾರೆ. ಭೂಮಿ ಮೇಲೆ ಮಾನವ ಸೇರಿದಂತೆ ಇತರ ಜೀವಿಗಳ ಉಗಮ, ವಿಕಸನಕ್ಕೆ ಸಂಬಂಧಿಸಿದ ಅನೇಕ ವಾದ, ವಿವಾದಗಳಿಗೆ ತೆರೆ ಎಳೆಯುವ ಮೂಲಕ ಈ ಕುರಿತು ಸ್ಪಷ್ಟ ಚಿತ್ರಣವನ್ನು ಈ ಯೋಜನೆ ಒದಗಿಸುವ ವಿಶ್ವಾಸವಿದೆ.

ಯುಕರೆಯೋಟ್ಸ್ ಎಂದರೇನು:

 

ಬ್ಯಾಕ್ಟಿರಿಯಾ ಹಾಗೂ ಆರ್ಕೆಯಾ ಹೊರತುಪಡಿಸಿ ಉಳಿದ ಎಲ್ಲ ಜೀವಿಗಳು ಈ ಕುಟುಂಬಕ್ಕೆ ಸೇರುತ್ತವೆ. ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರ ಸೇರಿದಂತೆ ಬೀಜಕೇಂದ್ರ  (ನ್ಯೂಕ್ಲಿಯಸ್) ಹೊಂದಿರುವ ಜೀವಕೋಶಯಿರುವ ಎಲ್ಲ ಜೀವಿಗಳನ್ನು ಇದು ಒಳಗೊಂಡಿದೆ. ಬೀಜಕೇಂದ್ರ ಅನುವಂಶಿಕ ಮಾಹಿತಿಯನ್ನು ಒಳಗೊಂಡಿರುವ ಡಿಎನ್‌ಎ ನೆಲೆಯಾಗಿದೆ. ಒಂದು ಅಂದಾಜಿನ ಪ್ರಕಾರ ಭೂಮಿ ಮೇಲೆ 1-1.5 ಕೋಟಿ ಯುಕರೆಯೋಟ್ಸ್ ಪ್ರಭೇದಗಳಿವೆ.

ಅರ್ಥ್ ಬಯೋಜೀನೋಮ್ ಪರಿಚಯ:

ಭೂಮಿಯ ಮೇಲೆ ಜೀವಿಗಳ ವಿಕಾಸ, ಸಂಘಟನೆ ಹಾಗೂ ಸಂಯೋಜನೆಯನ್ನು ಅರ್ಥೈಸಿಕೊಳ್ಳುವುದು ಅರ್ಥ್ ಬಯೋಜೀನೋಮ್ ಪ್ರಾಜೆಕ್ಟ್ (ಇಬಿಪಿ) ಮುಖ್ಯಗುರಿ . ಭೂಮಿ ಮೇಲೆ ಈಗಾಗಲೇ ಗುರುತಿಸಲ್ಪಟ್ಟಿರುವ 1.5 ಕೋಟಿ ಯುಕರೆಯೋಟ್ ಪ್ರಭೇದಕ್ಕೆ ಸೇರಿದ ಜೀವಿಗಳ ಜೀನೋಮ್ ಮಾಹಿತಿಯನ್ನು ಅನುಕ್ರಮದಲ್ಲಿ ಜೋಡಿಸುವ ಜತೆಗೆ ವಿಶ್ಲೇಷಣೆಗೊಳಪಡಿಸುವ ಉದ್ದೇಶ ಇದಕ್ಕಿದೆ. ಇನ್ನು ಯುಕರೆಯೋಟ್ ಕುಟುಂಬಕ್ಕೆ ಸೇರಿದ ಅಂದಾಜು 1.5 ಕೋಟಿ ಅಪರಿಚಿತ ಪಭೇದದ ಜೀವಿಗಳ ಅಧ್ಯಯ ಕೈಗೊಳ್ಳುವ ನಿಟ್ಟಿನಲ್ಲಿಯೂ ಇದು ಕಾರ್ಯನಿರ್ವಹಿಸಲಿದೆ.ಅಪರಿಚಿತ ಪಭೇದಗಳಲ್ಲಿ ಬಹುತೇಕ ಏಕಕೋಶ ಜೀವಿಗಳಿದ್ದು, ಕೀಟಗಳು ಹಾಗೂ ಸಮುದ್ರದಲ್ಲಿ ಜೀವಿಸುವ ಪ್ರಾಣಿಗಳು ಸೇರಿವೆ. ಸಿಟಿಜನ್ ಸೈಂಟಿಸ್ ಎಂಬ ಆಂದೋಲನದ ಮೂಲಕ ಈ ಯೋಜನೆಗೆ ಅಗತ್ಯವಾದ ಮಾಹಿತಿಯನ್ನು ಕಲೆ ಹಾಕುವ ಯೋಚನೆಯನ್ನು ಇಬಿಪಿ ಹೊಂದಿದೆ. ಅಮೆರಿಕ, ಯುರೋಪಿಯನ್ಒಕ್ಕೂಟ, ಚೀನಾ, ಬ್ರೆಜಿಲ್, ಕೆನಡಾ, ಆಸ್ಟ್ರೇಲಿಯಾ ಹಾಗೂ ಕೆಲವು ಆಫ್ರಿಕನ್ ರಾಷ್ಟ್ರಗಳ ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿ ಈ ಯೋಜನೆಯ ನೇತೃತ್ವವಹಿಸಿದೆ. ಈ ಯೋಜನೆ ಪೂರ್ಣಗೊಳ್ಳಲು 10 ವರ್ಷಗಳ ಸಮಯಾ ವಧಿ ಬೇಕಾಗಿದ್ದು, 4.7 ಬಿಲಿಯನ್ ಡಾಲರ್ ವೆಚ್ಚವಾಗಲಿದೆ. ಮಾಹಿತಿ ಸಂಗ್ರಹಿಸಿಡಲು 200 ಪೆಟಾಬೈಟ್ಸ್ ಡಿಜಿಟಲ್ ಸ್ಟೋರೇಜ್ ಸಾಮರ್ಥ್ಯದ ಸಾಧನದ ಅಗತ್ಯವಿದೆ.

ಯೋಜನೆಯ ಪ್ರಾಮುಖ್ಯತೆ

 

>ಭೂಮಿ ಮೇಲೆ ಜೀವ ಉಗಮ, ವಿಕಸನದ ಕುರಿತ ವೈಜ್ಞಾನಿಕ ಮಾಹಿತಿಯನ್ನು ಅರಿಯುವ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರವಹಿಸುವ ವಿಶ್ವಾಸ.

> ವೈದ್ಯಕೀಯ; ಕೃಷಿ, ಸಂರಕ್ಷಣೆ, ತಂತ್ರಜ್ಞಾನ ಹಾಗೂ ಆನುವಂಶಿಕ ಮಾಹಿತಿಗೆ  ಸಂಬಂಧಿಸಿದ ಜಾಗತಿಕ ಅನ್ವೇಷಣೆಗಳಿಗೆ ಇದು ಹೊಸ ಸಂಪನ್ಮೂಲವಾಗಲಿದೆ.

> ಅನುವಂಶಿಕ ಹಾಗೂ ಸೋಂಕು ಕಾಯಿಲೆಗಳಿಗೆ ನೂತನ ಔಷಧಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.

> ವೇಗವಾಗಿ ವೃದ್ಧಿಯಾಗುತ್ತಿರುವ ಜನಸಂಖ್ಯೆಗೆ ಅಗತ್ಯವಾದ ಜೈವಿಕ ಕೃತಕ ಇಂಧನಗಳು, ಆಹಾರ ಮೂಲಗಳ ಸೃಷ್ಟಿಗೆ ನೆರವು ಒದಗಿಸಲಿದೆ.

> ವಿನೂತನ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲಗಳನ್ನು ಪೂರೈಸಲಿದೆ.

About the author

ಕನ್ನಡ ಟುಡೆ

Leave a Comment