ರಾಜ್ಯ

ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ್ದ ಏಳು ಶಾಸಕರ ನಾಮಪತ್ರ ರದ್ದತಿಗೆ ಮನವಿ

ಮಂಡ್ಯ: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್​ ಉಲ್ಲಂಘಿಸಿ ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ್ದ ಏಳು ಮಾಜಿ ಶಾಸಕರ ನಾಮಪತ್ರಗಳನ್ನು ಅಂಗೀಕರಿಸದಂತೆ ಜೆಡಿಎಸ್​ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.

ಪಕ್ಷದ ವಿಪ್​ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಏಳು ಮಂದಿಯನ್ನು ಅನರ್ಹಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ನ್ಯಾಯಾಲಯದಲ್ಲಿದೆ. ಈ ಕುರಿತು ಅಂತಿಮ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ. ಹೀಗಾಗಿ ಎಲ್ಲ ಏಳು ಮಂದಿ ಮಾಜಿ ಶಾಸಕರ ನಾಮಪತ್ರಗಳನ್ನು ಅಂಗೀಕರಿಸಬಾರದು ಎಂದು ಮಂಡ್ಯ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಡಿ. ರಮೇಶ್​ ಅವರು ಆಯಾ ವಿಭಾಗದ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಎನ್.ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಮಾಗಡಿ ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಭೀಮಾನಾಯಕ್, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ ಅವರನ್ನು ಅನರ್ಹಗೊಳಿಸುವಂತೆ ಜೆಡಿಎಸ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ವಿಚಾರಣೆ ನಡೆಸಿರುವ ಹೈಕೋರ್ಟ್​ ಮೇ 7 ಒಳಗೆ ಪ್ರಕಟಿಸುವಂತೆ ಸ್ಪೀಕರ್​ಗೆ ಆದೇಶ ನೀಡಿದೆ.

 

About the author

ಕನ್ನಡ ಟುಡೆ

Leave a Comment