ರಾಜಕೀಯ

ಜೆಡಿಎಸ್‌ ಎಷ್ಟು ಗೆಲ್ಲುತ್ತೆ ಅಪ್ಪ ಮಕ್ಕಳೇ ತೀರ್ಮಾನಿಸಲಿ: ಬಿ.ಎಸ್‌.ಯಡಿಯೂರಪ್ಪ

ಕಲಬುರಗಿ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸುಳ್ಳಿನ ಕಂತೆಯಾಗಿದ್ದು, ದೇಶದ್ರೋಹ ಪ್ರಕರಣ ಕೈ ಬಿಡುವುದಾಗಿ ಹೇಳಿರುವುದು ಮೂರ್ಖತನ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಹಾಸನದಲ್ಲಿ ನೂರಕ್ಕೆ ನೂರು ಗೆದ್ದೇ ಗೆಲ್ತೇವೆ. ಮಂಡ್ಯ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟುಕೊಡಲ್ಲ. ತುಮಕೂರಿನಲ್ಲಿ ಎಚ್‌. ಡಿ. ದೇವೇಗೌಡರಿಗೆ ಟಫ್ ಫೈಟ್ ಕೊಡುತ್ತೇವೆ. ಜೆಡಿಎಸ್ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೆ ಎಂದು ಅಪ್ಪ ಮಕ್ಕಳೇ ತೀರ್ಮಾನ ಮಾಡಬೇಕು ಎಂದು ಬಿಎಸ್‌ವೈ ಸವಾಲು ಹಾಕಿದರು. ಕಲಬುರಗಿ ಕ್ಷೇತ್ರದಿಂದ ಡಾ. ಉಮೇಶ್ ಜಾಧವ್ ಬಹುಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ 22 ಕ್ಕೂ ಹೆಚ್ಚು, ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸುತ್ತದೆ; ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗುವುದು ನಿಶ್ಚಿತ ಎಂದು ಯಡಿಯೂರಪ್ಪ ನುಡಿದರು.

About the author

ಕನ್ನಡ ಟುಡೆ

Leave a Comment