ಅಂಕಣಗಳು

ಇಂದು ಜೈನಧರ್ಮಿಯರು ಆಚರಿಸುವ ದಶಧರ್ಮ ಪರ್ವ ಪ್ರಾರಂಭ

ಇವತ್ತಿನಿಂದ  ಜೈನಧರ್ಮಿಯರು ಆಚರಿಸುವ ದಶಧರ್ಮ ಪರ್ವ ಪ್ರಾರಂಭ . ಇದು ಜೈನ ಧರ್ಮಿಯರ ಹಬ್ಬಗಳಲ್ಲಿಯೇ ಅತ್ಯಂತ ಪವಿತ್ರವಾದದ್ದು ಮತ್ತು ರಾಜಪರ್ವ. ಈ ಹತ್ತು ದಿನಗಳಲ್ಲಿ ಇವತ್ತಿನ ಪರ್ವ ಉತ್ತಮ ಕ್ಷಮಾ…ಇದರಲ್ಲಿ ಜಗತ್ತಿನ ಎಲ್ಲಾ ಜೀವಿಗಳಲ್ಲಿ ಕ್ಷಮೆ ಕೇಳುತ್ತಾ ಎಲ್ಲಾ ಜೀವಿಗಳನ್ನು ಕಾಯ, ವಾಚ ಮನಸಾ, ಕ್ಷಮಿಸುವುದು ಕೇವಲ ಮನುಷ್ಯರ ಬಳಿ ಮಾತ್ರ ಕ್ಷಮೆ ಕೇಳದೆ ಏಕೇಂದ್ರಿಯ ಸಸ್ಯಜೀವಿ ತ್ರಿಯೇಂದ್ರಿಯ ಹೀಗೆ ಎಲ್ಲ ಜೀವಿಗಳಲ್ಲಿ ನಮ್ಮಿಂದಾದ ನೋವುಗಳಿಗೆ ಹೃದಯದಿಂದ ಕ್ಷಮೆ ಕೇಳಿ ಅವರಿಂದಾದ ತಪ್ಪು ನೋವುಗಳಿಗೆ ಆತ್ಮದಿಂದ  ಕ್ಷಮಿಸುವುದು… ಜಗತ್ತಿನ ಪ್ರತಿಯೊಂದು ಜೀವಿಗಳಲ್ಲಿ ಮೈತ್ರಿ ಭಾವದಲ್ಲಿ ಇದ್ದು ಕೊಂಡು ಇತರರು ನೋವು ಮಾಡಿದರೂ ಯಾವುದೇ ದ್ವೇಷ ಇಟ್ಟಕೊಳ್ಳದೆ ಅಷ್ಟೇ ಸಮತಾ ಭಾವದಿಂದ ಅವರನ್ನು ಕ್ಷಮಿಸುತ್ತಾ ಇರುವುದು, ಇದು ಕೇವಲ ಇವತ್ತಿಗೆ ಮಾತ್ರ ಸೀಮಿತವಲ್ಲ ಇವತ್ತು ವಿಶೇಷವಾಗಿ ಈ ಧರ್ಮವನ್ನು ಆಚರಿಸಿದರೂ ಇನ್ನು ವರ್ಷಪೂರ್ತಿ ಇದೇ ಮನೋಭಾವದಲ್ಲಿ ಇದ್ದುಕೊಂಡು ಸಮತಾ ಭಾವದಿಂದ ಇರಬೇಕು ಆ ಕಾರಣದಿಂದ ಇವತ್ತಿನ ಈ ಕ್ಷಮಾಗುಣ ಹಬ್ಬ ಜೈನರಿಗೆ ಮನಸ್ಸಿನ ರಾಗ ದ್ವೇಷ ಕಳೆಯಲು ಅತ್ಯಂತ ಸು ಸಂದರ್ಭ… ಎಲ್ಲರಲ್ಲೂ ಕ್ಷಮೆ ಕೇಳಿ  ಎಲ್ಲರನ್ನು ಕ್ಷಮಿಸಿ…ಆತ್ಮ  ಪರಿಶುದ್ಧ ಮಾಡಿಕೊಳ್ಳುತ್ತ ಮಹಾವೀರವಾಣಿಯಂತೆ ನಾವು ಬದುಕಿ ಇತರರನ್ನು ನೆಮ್ಮದಿಯಿಂದ ಬದುಕುವಂತೆ ಮಾಡಲು ಸಹಕರಿಸೋಣ….ಸರ್ವೇ ಜನ ಸುಖೀನೋ ಭವಂತು…
     ಶ್ವೇತಾ ನಿಹಾಲ್ ಜೈನ್
        ಲೇಖಕಿ,ಪತ್ರಕರ್ತೆ

About the author

ಕನ್ನಡ ಟುಡೆ

Leave a Comment