ರಾಷ್ಟ್ರ

ಜೈಲಿನಲ್ಲಿರುವ ಲಾಲು ಆರೋಗ್ಯದಲ್ಲಿ ಏರುಪೇರು: ದೆಹಲಿ ಎಐಐಎಂಎಸ್​ಗೆ ದಾಖಲು

ನವದೆಹಲಿ: ಬಹುಕೋಟಿ ಮೇವು ಹಗರಣದಲ್ಲಿ ಆರೋಪಿಯಾಗಿ ರಾಂಚಿ ಜೈಲು ಸೇರಿರುವ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆಗಾಗಿ ಎಐಐಎಮ್ಎಸ್ (AIIMS)ಗೆ ದಾಖಲಿಸಲಾಗಿದೆ.

ಮಾ.17ರಿಂದಲೇ ಲಾಲು ಅನಾರೋಗ್ಯಕ್ಕೆ ತುತ್ತಾಗಿದ್ದು ರಾಜೇಂದ್ರ ವೈದ್ಯಕೀಯ ಸಂಸ್ಥೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಲಾಲು ಪ್ರಸಾದ್ ಯಾದವ್​ ಆರೋಗ್ಯದ ಬಗ್ಗೆ ಮಾತನಾಡಿದ ಎಐಐಎಂಎಸ್​ ವೈದ್ಯರು, ಲಾಲು ಪ್ರಸಾದ್​ ದೇಹದ ಸ್ಥಿತಿ ಸ್ಥಿರವಾಗಿದೆ. ಶುಗರ್​ ಹೆಚ್ಚಾಗಿದ್ದು ಕಿಡ್ನಿಯಲ್ಲಿ ಸ್ವಲ್ಪಮಟ್ಟಿನ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ ಲಾಲು ಚಿಕಿತ್ಸೆಯನ್ನು ದೆಹಲಿಯ ಎಐಐಎಂಎಸ್​ನಲ್ಲಿ ಮುಂದುವರಿಸಲು ಅನುಮತಿ ನೀಡಿದೆ. ಆದರೆ, ರಾಂಚಿ ವೈದ್ಯರು ವಿಮಾನ ಪ್ರಯಾಣ ನಿರಾಕರಿಸಿದ್ದರಿಂದ ಟ್ರೇನ್​ನಲ್ಲಿ ಆಸ್ಪತ್ರೆಗೆ ಆಗಮಿಸಿದ್ದಾರೆ.

About the author

ಕನ್ನಡ ಟುಡೆ

Leave a Comment