ಅ೦ತರಾಷ್ಟ್ರೀಯ

ಜೈಶ್ ಮುಖ್ಯಸ್ಥ ಮಸೂದ್ ಅಜರ್ ಬಹವಲ್ಪುರದಲ್ಲಿ ಸೇಫ್: ಗುಪ್ತಚರ ಮಾಹಿತಿ

ನವದೆಹಲಿ: ಭಾರತೀಯ ವಾಯುಪಡೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯ ನಿಯಂತ್ರಣ ಕೇಂದ್ರ ಸೇರಿದಂತೆ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ್ದರೆ ಇತ್ತ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಿಂದ ಅತ್ಯಂತ ಸುರಕ್ಷಿತ ಕೇಂದ್ರವಾದ ಪಾಕಿಸ್ತಾನದ ಬಹವಲ್ಪುರದಲ್ಲಿ ಕೊಟ್ಗಾನಿ ಸಮೀಪಕ್ಕೆ ಹೋಗಿ ಭದ್ರತೆಯಲ್ಲಿ ಇದ್ದಾನೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿ 40 ಯೋಧರು ಹುತಾತ್ಮರಾದ ಮೂರು ದಿನಗಳ ನಂತರ ಅಜರ್ ನನ್ನು ತೀವ್ರ ಭದ್ರತೆಯಿರುವ ಕೊಟ್ಗಾನಿಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ. ಕಳೆದ ಫೆಬ್ರವರಿ 14ರಂದು ಸೇನಾ ಸಿಬ್ಬಂದಿಗಳ ಮೇಲೆ ದಾಳಿ ನಡೆದ ವೇಳೆ ಮಸೂದ್ ಅಜರ್ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿದ್ದನು ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

About the author

ಕನ್ನಡ ಟುಡೆ

Leave a Comment