ರಾಜ್ಯ ಸುದ್ದಿ

ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದ ಬಾಲಕಿ ಸಾವು

ಸಿರುಗುಪ್ಪ (ಬಳ್ಳಾರಿ): ನಗರದ 14ನೇ ವಾರ್ಡಿನ ಮನೆಯೊಂದರಲ್ಲಿ ಗುರುವಾರ ಸೀರೆಯಿಂದ ಕಟ್ಟಿದ್ದ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಚಾಂದ್‌ಬಾಷಾ ಅವರ ಮಗಳು ಪರ್ವಿನ್‌ಬೇಗಂ (13) ಮೃತಳು. ಮನೆಯಲ್ಲಿ ಜೋಕಾಲಿ ಆಡುತ್ತಿದ್ದಾಗ, ಸೀರೆ ಉರುಳಾಗಿ ಸುತ್ತಿಕೊಂಡಿದೆ. ಮರಳಿ ಉರುಳು ಬಿಚ್ಚುವಾಗ ಜೋಕಾಲಿ ಜೋರಾಗಿ ತಿರುಗಿದೆ. ನಿಯಂತ್ರಣ ತಪ್ಪಿದ ಬಾಲಕಿ ಜೋಕಾಲಿಯಿಂದ ಏಕಾಏಕಿ ದೊಪ್ಪನೆ ನೆಲದ ಮೇಲೆ ಬಿದ್ದಿದ್ದಾಳೆ. ತೀವ್ರ ಅಸ್ವಸ್ಥಳಾದ ಬಾಲಕಿ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾಳೆ. ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಶಂಕಿಸಲಾಗಿದೆ.

ಈ ಬಾಲಕಿ, ನಗರದ ಶಾಂತಿನಿಕೇತನ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ಕೋರಿ, ಶಾಲೆಯಲ್ಲಿ ಶುಕ್ರವಾರ ಮೌನಾಚರಣೆ ನಡೆಸಿ, ಶಾಲೆಗೆ ರಜೆ ಘೋಷಿಸಲಾಗಿತ್ತು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಮೌನೇಶ್‌ ಮಾಲಿ ಪಾಟೀಲ್‌, ಪಿಎಸ್‌ಐ ಕೆ.ವಸಕೇರಪ್ಪ ಸ್ಥಳಕ್ಕೆ ಭೇಟಿನೀಡಿದ್ದರು.

About the author

ಕನ್ನಡ ಟುಡೆ

Leave a Comment