ಸಿನಿ ಸಮಾಚಾರ

ಟಗರು  ಸಿನಿಮಾದಿಂದ ಹೆಚ್ಚಿದೆ ಜನಪ್ರೀಯತೆ ಮಾನ್ವಿತಾ

ಬೆಂಗಳೂರು: ಟಗರು ಚಿತ್ರದ ನಂತರ ತಮ್ಮ ಬದುಕಿನಲ್ಲಾದ ಬದಲಾವಣೆಗಳ ಬಗ್ಗೆ ಮಾನ್ವಿತಾ ಹರೀಶ್‌ ಸಂಸದಿಂದ  ಹೇಳಿಕೊಂಡಿದ್ದಾರೆ. ಗೆಲುವಿನ ಹುಮ್ಮಸ್ಸು ಮತ್ತು ಜನರ ಪ್ರೀತಿಯ ಕುರಿತು ಕೃತಜ್ಞತೆ ತಿಳಿಸಿದ್ದಾರೆ.

ಮೊನ್ನೆ ಯಾವುದು  ಕಾಲೇಜಿಗೆ ಹೋಗಿದ್ದೆ ಅಲ್ಲಿ ಸ್ಟುಡೆಂಟ್ಸ್‌ ನನ್ನ ನೋಡಿದ ಕೂಡ್ಲೇ ಪುನರ್ವಸು… ಪುನರ್ವಸು… ಅಂತ ಒಂದೇ ಸಮನೆ ಕೂಗೋಕೆ ಶುರುಮಾಡಿದರು. ಫ್ಯಾನ್‌ ಫಾಲೊವರ್ಸ್‌ ಎಷ್ಟು ಹೆಚ್ಚಾಗಿದಾರೆ ಅಂದ್ರೆ ಒಬ್ಬೊಬ್ಳೆ ಹೊರಗಡೆ ಹೋಗೋದೇ ಕಷ್ಟ ಆಗತ್ತಿದೆ.

‘ಕೆಂಡಸಂಪಿಗೆ’ ಚಿತ್ರದಿಂದ ಜನಪ್ರಿಯರಾಗಿದ್ದರೂ ಆ ಚಿತ್ರದ ನಂತರ ಮಾನ್ವಿತಾಗೆ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ. ಕನಕ ಚಿತ್ರದಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದ್ದರೂ ಡಬ್ಬಿಂಗ್‌ ಬೇರೆಯವರು ಮಾಡಿದ್ದರಿಂದ ಪಾತ್ರದ ಸಮತೋಲನ ತಪ್ಪಿತು ಎಂದು ಹೇಳಿದರು.

ಆದರೆ ಆ ಎಲ್ಲಾ ಬೇಸರಗಳನ್ನು ಮರೆತು ಅವರೀಗ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅದಕ್ಕೆ ಕಾರಣ ಟಗರು ಈ ಚಿತ್ರದ ಪಾತ್ರಕ್ಕೆ ಜನರಿಂದ ಸಿಕ್ಕ ಸ್ಪಂದನ ಅವರನ್ನು ಸಂತೃಪ್ತಗೊಳಿಸಿದೆಯಂತೆ. ಈಗ ಕುಂತಲ್ಲಿ ನಿಂತಲ್ಲಿಯೆಲ್ಲ ಅವರಿಗೆ ‘ಮೆಂಟಲ್‌ ಹೋ ಜಾವಾ’ ಹಾಡೇ ಕೇಳುತ್ತಿದೆಯಂತೆ.ಟಕಿಲಾ ಶಾಟ್‌ ಅನ್ನು ಸಾಲ್ಟ್‌ ನೆಚ್ಚಿಕೊಂಡು ಕುಡಿದಂಥ ಅಮಲು ಅವರನ್ನು ಆವರಿಸಿದೆಯಂತೆ ಅಲ್ಲದೆ ಈ ಚಿತ್ರದಿಂದಲ್ಲಿ ತುಂಬ ಪ್ರಬುದ್ಧವಾಗಿ ಅಭಿನಯಿಸಿದ್ದೀಯಾ ಎಂದು ತುಂಬ ಜನರು ಹೇಳುತ್ತಿದ್ದಾರೆ.

ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದರಲ್ಲಿ ಸಾಕಷ್ಟು ಬೆಳೆದಿದ್ದೇನೆ. ಹಾಗಿದ್ದೂ ಇದು ನನ್ನ ಬೆಸ್ಟ್‌ ಎಂದು ನಾನು ಅಂದುಕೊಂಡಿಲ್ಲ. ಇದಕ್ಕಿಂತ ಉತ್ತಮವಾಗಿಯೂ ನಾನು ನಟಿಸಬಲ್ಲೆ. ನಟಿಸಬೇಕು ಎಂದು ಆಸೆಯೂ ಇದೆ ಎಂದು ಬೆಳೆಯುವ ಆಸೆಯನ್ನು ವ್ಯಕ್ತಪಡಿಸುತ್ತಾರೆ ಮಾನ್ವಿತಾ.

 

 

About the author

ಕನ್ನಡ ಟುಡೆ

Leave a Comment