ಸಿನಿ ಸಮಾಚಾರ

ಟರ್ಕಿಯಲ್ಲಿ ದುರಂತ: ಬೈಕ್‌ನಿಂದ ಬಿದ್ದ ನಟ ವಿಶಾಲ್‌ ಆಸ್ಪತ್ರೆಗೆ ದಾಖಲು

ನಟ, ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿ ಸುಂದರ್ ನಿರ್ದೇಶನದಲ್ಲಿ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿರುವ ಅವರು ಚಿತ್ರೀಕರಣದಲ್ಲಿ ಗಾಯಗೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದು ಆ್ಯಕ್ಷನ್ ಸನ್ನಿವೇಶದಲ್ಲಿ ಆಯತಪ್ಪಿ ಬೈಕ್‌ನಿಂದ ಬಿದ್ದಿದ್ದಾರೆ ಎಂದಿವೆ ಮೂಲಗಳು. ಅವರ ಎಡಗೈ, ಎಡಗಾಲಿಗೆ ಗಾಯಗಳಾಗಿವೆ. ಕೂಡಲೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕೈಗೆ, ಕಾಲಿಗೆ ಬ್ಯಾಂಡೇಜ್ ಹಾಕಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ ಚಿತ್ರತಂಡ. ವಿಶಾಲ್ ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ವಿಶಾಲ್ ಅಭಿಮಾನಿಗಳು ಟ್ವಿಟರ್‌ನಲ್ಲಿ ಟ್ಯಾಗ್ ಮಾಡುತ್ತಾ ಕಾಮೆಂಟ್ ಮಾಡುತ್ತಿದ್ದಾರೆ. ಎರಡು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಎರಡು ವಾರಗಳ ಬಳಿಕ ಭಾರತಕ್ಕೆ ಮರಳಲಿದ್ದಾರೆ ಎಂದಿವೆ ಮೂಲಗಳು. ಇನ್ನೊಂದು ಕಡೆ ವಿಶಾಲ್ ಸಿನಿಮಾವನ್ನು ಈ ವರ್ಷಾಂತ್ಯಕ್ಕೆ ರಿಲೀಸ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಅವರ ಅಭಿನಯದ ಅಯೋಗ್ಯ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರುತ್ತಿದೆ. ಇತ್ತೀಚೆಗಷ್ಟೇ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಾನು ಮದುವೆಯಾಗುತ್ತಿರುವ ಯುವತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು ವಿಶಾಲ್. ಹೈದರಾಬಾದ್ ಮೂಲದ ಅನಿಷಾ ರೆಡ್ಡಿಯನ್ನು ವಿಶಾಲ್ ವರಿಸುತ್ತಿದ್ದಾರೆ. ಡಿಸೆಂಬರ್ 21ರಂದು ಬಿಡುಗಡೆಯಾದ ‘ಕೆಜಿಎಫ್ ಚಾಪ್ಟರ್ 1’ ತಮಿಳು ಆವೃತ್ತಿ ಸಿನಿಮಾವನ್ನು ವಿಶಾಲ್ ತನ್ನ ವಿಶಾಲ್ ಫಿಲಂ ಫ್ಯಾಕ್ಟರಿ ಮೂಲಕ ಬಿಡುಗಡೆ ಮಾಡಿದ್ದರು. ತಮಿಳುನಾಡಿನಲ್ಲಿ ಈ ಸಿನಿಮಾ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಲ್ಲೂ ಹವಾ ಎಬ್ಬಿಸಿದ್ದು ಗೊತ್ತೇ ಇದೆ.

About the author

ಕನ್ನಡ ಟುಡೆ

Leave a Comment